ಹಿಂದುಗಳ ಮೇಲೆ ದಾಳಿ, ಬೆದರಿಕೆ ಭಯ: ಬಾಂಗ್ಲಾದೇಶದಲ್ಲಿ ದುರ್ಗೆಯ ಪ್ರತಿಷ್ಠಾಪನೆ, ಮೆರವಣಿಗೆ ಬಂದ್​​

Ravi Talawar
ಹಿಂದುಗಳ ಮೇಲೆ ದಾಳಿ, ಬೆದರಿಕೆ ಭಯ: ಬಾಂಗ್ಲಾದೇಶದಲ್ಲಿ ದುರ್ಗೆಯ ಪ್ರತಿಷ್ಠಾಪನೆ, ಮೆರವಣಿಗೆ ಬಂದ್​​
WhatsApp Group Join Now
Telegram Group Join Now

ಢಾಕಾ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಕ್​ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಹಿಂದುಗಳ ಮೇಲಿನ ದಾಳಿ ಅವ್ಯಾಹತವಾಗಿ ಮುಂದುವರಿದಿದೆ. ನವರಾತ್ರಿ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ದುರ್ಗೆಯ ಆಚರಣೆಯ ಮೇಲೂ ದಾಳಿಕೋರರ ಕರಿನೆರಳು ಬಿದ್ದಿದ್ದು, ಈ ಬಾರಿ ಕೇವಲ ಪೂಜೆ ಮಾತ್ರ ನಡೆಸಲು ಅಲ್ಲಿನ ಅಲ್ಪಸಂಖ್ಯಾತ ಹಿಂದು ಸಮುದಾಯ ತೀರ್ಮಾನಿಸಿದೆ.

ದುರ್ಗಾದೇವಿ ಮೂರ್ತಿಯ ಮೆರವಣಿಗೆ, ಸಾರ್ವಜನಿಕ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರ ವಿರುದ್ಧ ಪ್ರತಿಭಟನೆ ದಾಖಲಿಸಲು ಹಿಂದು ಸಮುದಾಯ ಈ ವರ್ಷ ದುರ್ಗಾ ಪೂಜೆಯನ್ನು ಸರಳವಾಗಿ ನಡೆಸಲು ನಿರ್ಧರಿಸಿದೆ.

ನಿಲ್ಲದ ಕೋಮು ದಾಳಿಗಳು: ಶೇಕ್​ ಹಸೀನಾ ಸರ್ಕಾರದ ವಿರುದ್ಧ ನಡೆದ ನಾಗರಿಕ ಬಂಡಾಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಆಗಸ್ಟ್​ 5ರಿಂದ ಆಗಸ್ಟ್​ 20ರ ನಡುವೆ ಅಂದರೆ 15 ದಿನಗಳಲ್ಲಿ ಹಿಂದು ಕುಟುಂಬಗಳ ಮೇಲೆ 2010 ದಾಳಿ ಘಟನೆಗಳು ದಾಖಲಾಗಿವೆ. ಇದರಲ್ಲಿ ಹಲವು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಧ್ಯಂತರ ಸರ್ಕಾರಕ್ಕೆ ದೂರು ನೀಡಲಾಗಿದೆ. ಭದ್ರತೆ ನೀಡುವ ಭರವಸೆ ಮಧ್ಯೆಯೂ ದಾಳಿ, ಬೆದರಿಕೆಗಳು ಮಾತ್ರ ನಿಂತಿಲ್ಲ ಎಂದು ಹಿಂದು ಮುಖಂಡರು ಹೇಳಿದ್ದಾರೆ.

 

WhatsApp Group Join Now
Telegram Group Join Now
Share This Article