ಸಬ್ಸಿಡಿ ದರದ ಬೀಜ ಪಡೆದು ರೈತರು ಅಭಿವೃದ್ಧಿ ಹೊಂದಲಿ: ಬಾಬಾಸಾಹೇಬ ಪಾಟೀಲ 

Ravi Talawar
ಸಬ್ಸಿಡಿ ದರದ ಬೀಜ ಪಡೆದು ರೈತರು ಅಭಿವೃದ್ಧಿ ಹೊಂದಲಿ: ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now

ನೇಸರಗಿ : ಹಿಂಗಾರು ಬೆಳೆಗಳಾದ ಬಿಳಿ  ಜೋಳ, ಕಡಲೆ ಭೀಜಗಳು ರಾಜ್ಯ ಸರ್ಕಾರ ಸಬ್ಸಿಡಿ ದಲದಲ್ಲಿ ನೀಡುವ  ಕೃಷಿ ಇಲಾಖೆಸಹಯೋಗದಲ್ಲಿ ವಿವಿದ್ದೋದ್ದೇಶಗಳ ಗ್ರಾಮೀಣಭಿವೃದ್ಧಿ ಕೃಷಿ ಸಹಕಾರಿ ಸಂಘಗಳಲ್ಲಿ ರೈತರಿಗೆ ವಿತರಣೆ ಮಾಡುತ್ತಿದ್ದು ರೈತರು  ಇದರ ಸದುಪಯೋಗ  ಪಡೆದುಕೊಳ್ಳಬೇಕೆಂದು ಚನ್ನಮ್ಮನ ಕಿತ್ತೂರು  ಶಾಸಕರಾದ    ಬಾಬಾಸಾಹೇಬ ಪಾಟೀಲ ಹೇಳಿದರು.

      ಅವರು ಸಮೀಪದ ನೇಗಿನಹಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಕೃಷಿ ಇಲಾಖೆ ಬೈಲಹೊಂಗಲ, ರೈತರ ಸಂಪರ್ಕ ಕೇಂದ್ರ ನೇಸರಗಿ ಇವರ ಸಹಯೋಗದಲ್ಲಿ ರೈತರಿಗೆ ಬೀಜ ವಿತರಣೆ ಮಾಡಿ ಮಾತನಾಡಿದರು.  ಬೈಲಹೊಂಗಲ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಬಸವರಾಜ ದಳವಾಯಿ, ನೇಸರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ  ಆರ್. ಐ. ಕುಂಬಾರ  , ಮತ್ತು ಪಿ . ಕೆ. ಪಿ. ಎಸ್. ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಮತ್ತು ನೇಗಿನಹಾಳ ಗ್ರಾಮದ ರೈತರು, ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article