ಕ್ಯಾಲಿಫೋರ್ನಿಯಾ: ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ ನೀಡಿರುವ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳು ಹೆಚ್ಚು ನೀರು ಕುಡಿಬೇಕು, ಚಟುವಟಿಕೆಯಿಂದಿರಬೇಕು, ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ.
ಆದರೆ ಕ್ಯಾಲಿಫೋರ್ನಿಯಾದ ಶಿಕ್ಷಕರೊಬ್ಬರು ತರಗತಿ ವೇಳೆ ಯಾರು ಕಡಿಮೆ ಬಾರಿ ಶೌಚಾಲಯಕ್ಕೆ ಹೋಗುತ್ತಾರೋ ಅವರಿಗೆ ಬೋನಸ್ ಅಂಕಗಳನ್ನು ನೀಡಿದ್ದು, ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಏಕೆಂದರೆ ದಿನಕ್ಕೆ 6 ರಿಂದ 8 ಬಾರಿ ಮೂತ್ರ ವಿಸರ್ಜನೆ ಮಾಡಲೇಬೇಕು, ದೇಹದಲ್ಲಿ ಚಯಾಪಚಯ ಕ್ರಿಯೆ ನಡೆಯಲು ನೀರಿನ ಅವಶ್ಯಕತೆ ತುಂಬಾ ಇದೆ.
ಮೂತ್ರಕ್ಕೆ ಹೋಗಬೇಕಾಗುತ್ತದೆ ಎಂದು ನೀರು ಕುಡಿಯದಿದ್ದರೆ ಮಕ್ಕಳು ನಿರ್ಜಲೀಕರಣದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಗಣಿತ ಶಿಕ್ಷಕರೊಬ್ಬರು ವಾರಕ್ಕೆ ಒಂದೇ ಒಂದು ಬಾತ್ ರೂಂ ಪಾಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡುವ ಆಮಿಷವೊಡ್ಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.