ಪೊಲೀಸರ ಕೈಸೇರಿದ ದರ್ಶನ್, ಪವಿತ್ರಾಗೌಡರ ಮೊಬೈಲ್ ರಿಪೋರ್ಟ್

Ravi Talawar
ಪೊಲೀಸರ ಕೈಸೇರಿದ ದರ್ಶನ್, ಪವಿತ್ರಾಗೌಡರ ಮೊಬೈಲ್ ರಿಪೋರ್ಟ್
WhatsApp Group Join Now
Telegram Group Join Now

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಗ್ಯಾಂಗ್‌ ಜೈಲುಪಾಲಾಗಿದೆ.

ಮೂವರು ಜಾಮೀನು ಪಡೆದು ಹೊರಬಂದಿದ್ದರೆ, ಎ2 ದರ್ಶನ್‌ ಹಾಗೂ ಎ1 ಆರೋಪಿ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆಯು ಕೋರ್ಟ್‌ ಹಂತದಲ್ಲಿದೆ. ಈ ನಡುವೆ ಹೈದರಾಬಾದ್ ಸಿಎಫ್ಎಸ್ಎಲ್‌ಗೆ ಕಳಿಸಿದ್ದ ದರ್ಶನ್‌ ಹಾಗೂ ಪವಿತ್ರಾಗೌಡರ ಐಫೋನ್ ರಿಪೋರ್ಟ್ ಪೊಲೀಸರಿಗೆ ರವಾನೆ ಆಗಿದೆ.

ರೇಣುಕಾಸ್ವಾಮಿ ಕೊಲೆ ಸಂಬಂಧ ದರ್ಶನ್ ಹಾಗೂ ಪವಿತ್ರಾಗೌಡರ ಮೊಬೈಲ್ ಅನ್ನು ಪೊಲೀಸರು ಹೈದರಾಬಾದ್‌ಗೆ ರವಾನಿಸಿದ್ದರು. ಇದೀಗ ಕೊಲೆಗೆ ಸಂಬಂಧಿಸಿದ ಯಾವುದೇ ಫೋಟೊ, ವಿಡಿಯೋ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಕೊಲೆಗೆ ಸಂಬಂಧಿಸಿದ ಯಾವುದೇ ಫೋಟೊ, ವಿಡಿಯೋ ಇತರರಿಗೆ ಕಳಿಸಿಲ್ಲ.

ಇತರೆ ಆರೋಪಿಗಳು ದರ್ಶನ್ ಮೊಬೈಲ್‌ಗೆ ಯಾವುದೇ ಫೋಟೊ ವಿಡಿಯೋ ಕಳಿಸಿಲ್ಲ ಎನ್ನಲಾಗಿದೆ. ದರ್ಶನ್ ಮೊಬೈಲ್‌ನಲ್ಲಿ ಫೋಟೊ, ವಿಡಿಯೋ ಇರಬಹುದಾ ಅಂತಾ ಸಿಎಫ್ಎಸ್ಎಲ್‌ಗೆ ಕಳುಹಿಸಿದ್ದರು‌. ಆದರೆ ಸಿಎಫ್ಎಸ್ಎಲ್ ಪರೀಕ್ಷೆ ಬಳಿಕ ಎರಡು ಮೊಬೈಲ್‌ ಫೋನ್‌ ಅನ್ನು ವಾಪಸ್ ಪಡೆದಿದ್ದಾರೆ

 

 

WhatsApp Group Join Now
Telegram Group Join Now
Share This Article