ಬೆಳಗಾವಿ: ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಬಹಳವಾಗಿ ಕೇಳಿ ಬರುತಿದ್ದು, ಮೊದಲಿನಿಂದ ಚಿಕ್ಕೋಡಿ ಮತ್ತು ಉಪ ವಿಭಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು ಆದ್ಯತೆಯ ಮೇರೆಗೆ ಚಿಕ್ಕೋಡಿ ಮತ್ತು ಬೈಲಹೊಂಗಲ ಜಿಲ್ಲಾ ಕೇಂದ್ರಗಳಾಗಿ ಮಾಡಿ ಬೈಲಹೊಂಗಲ ಜಿಲ್ಲಾ ವ್ಯಾಪ್ತಿಗೆ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ರಾಮದುರ್ಗ, ಸವದತ್ತಿ ತಾಲೂಕು ಒಳಗೊಂಡ ಒಂದು ಜಿಲ್ಲೆಯನ್ನು ರಚಿಸಿ ತಾಯಿ ಚನ್ನಮ್ಮನ ಕಿತ್ತೂರು ವಲಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ತಗೆದುಕೊಳ್ಳಬೇಕೆಂದು ಮತ್ತು ಬೈಲಹೊಂಗಲ ಜಿಲ್ಲಾ ರಚನೆಗೆ ನಮ್ಮದು ಪಕ್ಷ ರಹಿತ ಬೈಲಹೊಂಗಲ ಜಿಲ್ಲಾ ರಚನೆಗೆ ಹೋರಾಟ, ಈ ಹೋರಾಟದಲ್ಲಿ ಈ ಭಾಗದ ಎಲ್ಲರೂ ಪಾಲ್ಗೊಳುತ್ತಾರೆ ಅದಕ್ಕೆ ನಮ್ಮ ಬೆಂಬಲ ಎಂದು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಗುರುವಾರದಂದು ಬೆಳಗಾವಿಯಲಿ ಪತ್ರಕರ್ತರನ್ನು ಉದ್ದೇಸಿಸಿ ಮಾತನಾಡಿದರು.