ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ.
ಭಾಲ್ಕಿ, ಕಮ್ಮರಡಿ, ಗೇರುಸೊಪ್ಪ, ಬಾಳೆಹೊನ್ನೂರು, ಗೌರಿಬಿದನೂರು, ಬೀದರ್, ಶೃಂಗೇರಿ, ಹೊನ್ನಾಳಿ, ಧರ್ಮಸ್ಥಳ, ಹುಮನಾಬಾದ್, ಹೊಸಕೋಟೆ, ಜಯಪುರ, ಎನ್ಆರ್ಪುರ, ಚನ್ನಗಿರಿ, ತ್ಯಾಗರ್ತಿ, ಸಿದ್ದಾಪುರ, ಕಾರ್ಕಳ, ಕಲಘಟಗಿ, ಅಥಣಿ, ನರಗುಂದ, ಕಮಲಾಪುರ, ಖಜೂರಿ, ಕೊಪ್ಪ, ಕಳಸ, ಮೂಡಿಗೆರೆ, ಭದ್ರಾವತಿ, ಕುಶಾಲನಗರ, ತರೀಕೆರೆಯಲ್ಲಿ ಮಳೆಯಾಗಿದೆ. ಚಾಮರಾಜನಗರದಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 18.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.