ಆನೇಕಲ್, ಅಕ್ಟೋಬರ್ 01: ಬಂಧಿತ ಪಾಕಿಸ್ತಾನ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಲವು ವಿಚಾರಗಳು ಅಧಿಕಾರಿಗಳಿಗೆ ಗೊತ್ತಾಗಿದೆ. ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿ ಕುಟುಂಬ ಭಾರತಕ್ಕೆ ಅಕ್ರಮವಾಗಿ ನುಸುಳಲು, ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡಿಎಲ್ ಎಲ್ಲವನ್ನು ಹೊಂದಲು ಮೆಹದಿ ಫೌಂಡೇಷನ್ನ ಪ್ರಮುಖ ವ್ಯಕ್ತಿ ಪರ್ವೇಜ್ ಸಹಾಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಬಂಧಿತ ಪಾಕಿಸ್ತಾನ ಪ್ರಜೆ ಬಳಿ ಭಾರತದ ಪಾಸ್ಪೋರ್ಟ್!
ಈ ಹಿನ್ನೆಲೆಯಲ್ಲಿ ಜಿಗಣಿ ಪೊಲೀಸರು ಪರ್ವೇಜ್ ಮತ್ತು ಇತನ ಸಂಪರ್ಕದಲ್ಲಿದ್ದವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಪಾಕಿಸ್ತಾನ ಪ್ರಜೆ ರಶೀದ್ ಅಲಿ ಸಿದ್ಧಕಿಗೆ ಮುಂಬೈ ಮತ್ತು ದೆಹಲಿಯಲ್ಲಿ ಹಲವರು ಪರಿಚಯಸ್ಥರಿದ್ದಾರೆ. ಹೀಗಾಗಿ, ಎರಡು ಪೊಲೀಸ್ ತಂಡ ಮುಂಬೈ ಮತ್ತು ದೆಹಲಿಗೆ ತೆರಳಿದೆ. ರಶೀದ್ ಕುಟುಂಬದವರ ಸಂಪರ್ಕದಲ್ಲಿರುವವರಿಗಾಗಿ ಶೋಧ ನಡೆಸುತ್ತಿವೆ