ಸಿಎಂ ಆಪ್ತರ ನಿವಾಸ, ಕಚೇರಿ ಮೇಲೆ ಇಡಿ ದಾಳಿ ಸಾಧ್ಯತೆ; ಜಮೀನಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

Ravi Talawar
ಸಿಎಂ ಆಪ್ತರ ನಿವಾಸ, ಕಚೇರಿ ಮೇಲೆ ಇಡಿ ದಾಳಿ ಸಾಧ್ಯತೆ; ಜಮೀನಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ
WhatsApp Group Join Now
Telegram Group Join Now

ಬೆಂಗಳೂರು, ಅ.01: ಮುಡಾ ಸೈಟು ಹಂಚಿಕೆ ಅವ್ಯವಹಾರ ಆರೋಪದ ಮೇಲೆ ಲೋಕಾಯುಕ್ತ ಸಂಸ್ಥೆ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿದ್ದಂತೆ ಇಡಿ ಅಲರ್ಟ್ ಆಗಿದೆ.

ಮುಡಾದ ಹಣದ ಬೇರೆ ಕ್ಷೇತ್ರಕ್ಕೆ ಬಳಸಿದ ಪ್ರಕರಣದ ಬಗ್ಗೆ ಇಡಿ ಇಸಿಐಆರ್ ದಾಖಲಿಸಿ ತನಿಖೆಗೆ ಮುಂದಾಗಿದೆ. ಇಡಿ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ಯಾವುದೇ ಕ್ಷಣದಲ್ಲಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಬಹುದಾಗಿದೆ. ಶೀಘ್ರದಲ್ಲೇ ಇಡಿ ಅಧಿಕಾರಿಗಳು ಸಿಎಂ ಆಪ್ತರ ನಿವಾಸ ಅಥವಾ ಕಚೇರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.

ಈಗಾಗಲೇ ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸಿರುವ ಇಡಿ ಅಧಿಕಾರಿಗಳು ಸಿಎಂ ಆಪ್ತರ ಚಲನವಲನ ಮೇಲೂ ನಿಗಾ ಇಟ್ಟಿದ್ದಾರೆ. ಹಾಘೂ ಸಿಎಂ ಆಪ್ತರ ಮನೆ, ಸಂಬಂಧಿಕರ ಮಾಹಿತಿ ಕಲೆ ಹಾಕಿದ್ದಾರೆ.

ರಾಜ್ಯಾದ್ಯಂತ ಸಿಎಂ ಆಪ್ತರ ನಿವಾಸ ಅಥವಾ ಕಚೇರಿ ಮೇಲೆ ಇಡಿ ದಾಳಿ ಮಾಡುವ ಸಾಧ್ಯತೆ ಇದೆ. ಶೀಘ್ರದಲ್ಲೇ ದಾಳಿ ನಡೆಸಿ ಮತ್ತಷ್ಟು ಮಾಹಿತಿ ಸಂಗ್ರಹಿಸಲು ತಯಾರಿ ನಡೆಯುತ್ತಿದೆ. ಜಾರ್ಖಂಡ್ ಮಾದರಿ ಇಡಿ ಅಧಿಕಾರಿಗಳು ದಾಳಿ ಮಾಡುವ ಸಾಧ್ಯತೆ ಇದೆ. ಇಡಿ ತಂಡ ಕೆಲ ಮಹತ್ವದ ಕಡತ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಮುಖ್ಯಮಂತ್ರಿ ಆಪ್ತರ ದೂರವಾಣಿ, ಬ್ಯಾಂಕ್ ಖಾತೆ ಸೇರಿದಂತೆ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ.

 

WhatsApp Group Join Now
Telegram Group Join Now
Share This Article