ಗುತ್ತಿಗೆದಾರ ಬೆಂಗಳೂರಿಗೆ ಹೋಗಿ ಎಲ್.ಓ.ಸಿ ತರುವ ಪದ್ಧತಿ ನಿಲ್ಲಬೇಕು: ಅಧ್ಯಕ್ಷ ರಾಜು ಪದ್ಮಣವರ

Ravi Talawar
ಗುತ್ತಿಗೆದಾರ ಬೆಂಗಳೂರಿಗೆ ಹೋಗಿ ಎಲ್.ಓ.ಸಿ ತರುವ ಪದ್ಧತಿ ನಿಲ್ಲಬೇಕು: ಅಧ್ಯಕ್ಷ ರಾಜು ಪದ್ಮಣವರ
WhatsApp Group Join Now
Telegram Group Join Now
ಬೆಳಗಾವಿ: ಪ್ರತಿ ಗುತ್ತಿಗೆದಾರರಿಗೆ ಅನುದಾನ ವಿಳಂಬವಾಗುತ್ತಿದ್ದು 3 ತಿಂಗಳಿಗೊಮ್ಮೆ 5-20%ಬಿಲ್ ನೀಡುತ್ತಿದ್ದು ಇದು ನಾವು ಮಾಡಿದ ಸಾಲದ ಬಡ್ಡಿ ಹಾಗೂ ಕೆಲಸ ಮಾಡಲು ಜಿ.ಎಸ್.ಟಿ ತುಂಬಲು ಸಾಲುತ್ತಿಲ್ಲಾ. ಕೆಲಸ ಮುಗಿದ ಮೇಲೆ ಬೆಂಗಳೂರಿಗೆ ಹೋಗಿ ಮತ್ತೆ ಅಲ್ಲಿನ ಅಧಿಕಾರಿಗಳ ಮಟ್ಟದಲ್ಲಿ ಮತ್ತೆ 5-10% ನೀಡಿ ತಮ್ಮ ಅನುದಾನ ಹಾಕಿಸಿಕೊಂಡು ಬರುವ ಪದ್ದತಿ ನಿಲ್ಲಲು ಶೀಘ್ರವಾಗಿ ನಮ್ಮ ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆ ಮಾಡಲಿದ್ದೇವೆ ಎಂದು ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರ ಸಂಘದ ಅಧ್ಯಕ್ಷ ರಾಜು ಪದ್ಮಣವರ ಹೇಳಿದರು.
ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆದ ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದ  ಮೊದಲನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿ 30% ನೀಡಿ ಕೆಲಸ ಮಾಡುವ ಪರಂಪರೆ ಹೀಗೆ ಮುಂದೆವರೆದರೆ ಗುತ್ತಿಗೆದಾರರ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಇದನ್ನು ತಡೆಯಲು ನಾವೆಲ್ಲರೂ ಸೇರಿ ಸರಕಾರದ ಗಮನಕ್ಕೆ ತರ ಬಯಸೋಣ ಎಂದರು.
ಸಂಘದ ಕಾರ್ಯದರ್ಶಿ ಚಂದ್ರಶೇಖರ ಜೋನಿ ಮಾತನಾಡಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 100ಕೋಟಿ ಪ್ಯಾಕೇಜ್ ಟೆಂಡರ್ ಆರಂಭಿಸಿರುವುದರಿಂದ ನೂರಾರು ಸಣ್ಣಪುಟ್ಟ ಗುತ್ತಿಗೆದಾರರಿಗೆ ಟೆಂಡರ್ ದೊರೆಯದಂತೆ ಮಾಡಲಾಗಿತ್ತು. ಇದರಿಂದ ಅದರ ವಿರುದ್ಧ ಹೋರಾಟ ಆರಂಭಿಸಿ ಪ್ರತಿಭಟನೆ ಮಾಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಂದು ನಮ್ಮ ಇಲಾಖೆಯ ಸಚಿವರಾದ ಸತೀಶ ಜಾರಕಿಹೊಳಿ ಅವರೆ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಉನ್ನತಮಟ್ಟದ ಸಭೆ ಕರೆದ ಅಂದು ಹಂತಹಂತವಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.
ಅಂದು ಆರಂಭಿಸಿದ ಹೋರಾಟದ ಪ್ರತಿಫಲವೇ ಇಂದು ಸಂಘ ನೋಂದಣಿ ಮಾಡಲಾಗಿದೆ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ 2000 ಅಧಿಕ ಗುತ್ತಿದಾರರಿದ್ದು ಅವರಿಗೆ ನಿತ್ಯ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು ಕೆಲವರು ಇದರಿಂದ ಹೊರಬರದೆ ಆತ್ಮಹತ್ಯೆ ಮಾಡಿಕೊಂಡು ಕುಂಟುಂಬವನ್ನು ಬೀದಿಗೆ ತರುವ ಪರಿಸ್ಥಿತಿ ಎದುರಾಗುತ್ತಿದ್ದರಿಂದ ಇತಂಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸಹಾಯವಾಗಲೇಂದೆ ಈ ಸಂಘಟನೆಯನ್ನು ಸ್ಥಾಪಿಸಲಾಯಿತು. ನಂತರ ಕೆಲವೇ ದಿನಗಳಲ್ಲಿ ಗುತ್ತಿಗೆದಾರರರು ಮರಣ ಹೊಂದಿದ್ದರೆ ಸಿ.ಬಿ.ಎಫ್ ಅನುದಾನದಲ್ಲಿ 10.ಲಕ್ಷ ನೀಡಲು ಸರಕಾರದಿಂದ ನೀಡುವಂತೆ ಮಾಡಲಾಗಿದೆ ಎಂದರು.
ಖಜಾಂಚಿ ಸಂತೋಷ ಗುಡಸ ಮಾತನಾಡಿ ಜಿಲ್ಲೆಯಲ್ಲಿ 2000ಕ್ಕೂ ಅಧಿಕ ಗುತ್ತಿಗೆದಾರರಿದ್ದು ಸಂಘದಲ್ಲಿ ಒಟ್ಟು 348 ಜನ ಗುತ್ತಿಗೆದಾರರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಸಂಘವನ್ನು ಆರಂಭಿಸಿ ಒಂದೇ ವರ್ಷದಲ್ಲಿ ಸಂಘದ ನೋಂದಣಿ, ಹೋರಾಟ, ಅತಿಥಿಗಳ ಸತ್ಕಾರ ಕಾರ್ಯಕ್ರಮ ಹಾಗೂ ಇತರೆ ಹಲವಾರು ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸುತ್ತಿದ್ದು ನಿತ್ಯ ಗುತ್ತಿಗೆದಾರ ಪರ ಕಾರ್ಯನಿರ್ವಹಿಸುತ್ತಿದೆ.
ಗುತ್ತಿಗೆದಾರ ಎಂ.ಕೆ ಮುಲ್ಲಾ ಪ್ರಾಸ್ಥಾವಿಕವಾಗಿ ಮಾತನಾಡಿ ಗುತ್ತಿಗೆದಾರರು ಅನುಭಿಸುತ್ತಿರುವ ಸಮಸ್ಯೆಗಳು, ಸರಕಾರದ ಹೊಸ-ಹೊಸ ಸುತ್ತೋಲೆಗಳಿಂದ ಬಹಳಷ್ಟು ಅಡಚಣೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು  ಅರಿತು ಹಿಂದಿನ ವರ್ಷ ನೂತನವಾಗಿ ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘವನ್ನು ನೊಂದಣಿ ಮಾಡಿಸಿ ಆರಂಭಿಸಿದ್ದೇವೆ ಕೇವಲ ಒಂದೇ ವರ್ಷದಲ್ಲಿ ಬಹಳಷ್ಟು ಬೆಂಬಲ ದೊರೆತಿದ್ದು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಣ್ಣ ಕೆಂಪಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಗುತ್ತಿಗೆದಾರರಿಗೆ ಸಂವಾದ ಕಾರ್ಯಕ್ರಮ ನೇರವೇರಿತು. ಈ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಆಡಳಿತ ಮಂಡಳಿ ಸದಸ್ಯರು ಸಲಹಾ ಸಮಿತಿ ಸದಸ್ಯರು ಹಾಗೂ ಜಿಲ್ಲೆಯ ಸಮಸ್ತ ಗುತ್ತಿಗೆದಾರರು ಭಾಗವಹಿಸಿದ್ದರು.
ಗುತ್ತಿಗೆದಾರ ಚನ್ನಪ್ಪ ನರಸಣ್ಣವರ ನಿರೂಪಿಸಿದರು, ಎಮ್.ಬಿ ಹಿರೇಮಠ ಸ್ವಾಗತಿಸಿದರು, ಉಪಾಧ್ಯಕ್ಷ ಎಸ್.ಆರ್ ಘೂಳಪ್ಪನವರ ವಂದಿಸಿದರು.
WhatsApp Group Join Now
Telegram Group Join Now
Share This Article