ಬೈಲಹೊಂಗಲ: ದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಸರಿಯಾಗಿಲ್ಲ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮೆರವಣಿಗೆ ಹೋಗಲು ಮಸೀದಿಗಳ ಮುಂದೆ ಹೋದರೆ ಕಲ್ಲು, ಪೆಟ್ರೋಲ್ ಬಾಂಬ್ ಎಸೆಯುತ್ತಾರೆ.
ಹಿಂದೂಗಳ ವ್ಯಾಪಾರ ವಹಿವಾತ್ತಿನ ಮೇಲೆ ದಾಳಿ ಮಾಡತಾರೆ, ಈಗ 15% ಜನಸಂಖ್ಯೆ ಇರುವ ಅವರು ಮುಂದಿನ ದಿನಮನಗಳಲ್ಲಿ 40% ಆದರೆ ಯಾವ ಹಿಂದೂ ಶಾಸಕನು ಆಗಲ್ಲ, ಸಚಿವನು ಆಗೋಲ್ಲ, ಮುಖ್ಯಮಂತ್ರಿ ಆಗೋಲ್ಲ, ನಿಮ್ಮ ಬೈಲಹೊಂಗಲದಲ್ಲಿ ಮಹಾಂತೇಶ ಕೌಜಲಗಿ ಶಾಸಕರು ಆಗೋಲ್ಲ. ಮುಸ್ಲಿಮರ ಸಾಮ್ರಾಜ್ಯ ಆಗುತ್ತದೆ ಎಂದು ವಿಜಯಪುರ ಶಾಸಕ, ಹಿಂದೂ ಪೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅವರು ನಗರದಲ್ಲಿ ಹಿಂದೂ ಮಹಾಗಣಪತಿ ಗಣೇಶೋತ್ಸವದ 21 ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ ನಾವು ಹಿಂದೂಗಳು ಲಿಂಗಾಯತರು, ಕುರುಬರು, ದಲಿತರು, ಬ್ರಾಹ್ಮಣರು, ಜೈನರು, ವಾಲ್ಮೀಕಿ ಅಂತ ವಿಂಗಡಣೆ ಆಗಿದ್ದೇವೆ ಅದಕ್ಕಾಗಿ ಅದಕ್ಕಾಗಿ ಅವರು ಮಸೀದಿ ಮುಂದೆ ಗಣೇಶ ಬಂದರೆ ಕಲ್ಲು ಒಗಿಯೋದು, ಪೆಟ್ರೋಲ್ ಬಾಂಬ್ ದಾಳಿ ಮಾಡೋದು, ಪೊಲೀಸ್ ಜಿಪ್ ಗೆ ಬೆಂಕಿ ಹಚ್ಚೋದು, ಹಿಂದೂಗಳ ಅಂಗಡಿಗಳ ಮೇಲೆ ದಾಳಿ ಮಾಡೋದು ನಿರಂತವಾಗಿ ನಡೀತಾ ಇದೆ. ಬಾಂಗ್ಲಾ ಪ್ರಧಾನಿ ಅಲ್ಲಿನ ದಾಳಿಗೆ ಹೆದರಿ ಮುಸ್ಲಿಂ ರಾಷ್ಟ್ರಗಳ ಮೊರೆ ಹೋಗದೆ ಭಾರತಕ್ಕೆ ಆಶ್ರಯ ಬೇಡಿ ಬಂದಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಪರಿಸ್ಥಿತಿ ಹೇಳತೀರಲಾಗಿದೆ.. ಹೀಗೆ ಮುಂದೆ ನಡೆದರೆ ಇಸ್ಲಾಮಿಕರ ಆಗುತ್ತದೆ. ಹಿಂದೂಗಳ ಜಾಗ್ರತರಾಗಿ ಸನಾತನ ಹಿಂದೂ ಧರ್ಮ ಉಳಿಸಿ ಬೆಳೆಸುವ ಶಕ್ತಿ ಹಿಂದೂ ಯುವಕರ ಕೈಯಲ್ಲಿದೆ ಎಂದರು.
ಶಾಸಕ ಹರೀಶ ಪೂಂಜಾ ಮಾತನಾಡಿ ಹಿಂದೂ ಯುವಕರು ರಕ್ತ ಕೊಟ್ಟಾದರೂ ಹಿಂದೂ ಧರ್ಮ ರಕ್ಷಣೆಗೆ ನಿಲ್ಲಬೇಕು ಮತ್ತು ಬೆಳೆಸಬೇಕು.ಡಾ. ಬಾಬಾಸಾಹೇಬ ಅಂಬೇಡ್ಕರ್ ಆ ಧರ್ಮದ ಅಕ್ರಮಕಾರಿ ಇಸ್ಲಾಮಿಕರಣ ಅರಿತು ಇಲ್ಲಿನ ಮುಸ್ಲಿಂ ಜನಾಂಗ ಪಾಕಿಸ್ತಾನಕ್ಕೆ ಕಳಿಸಿ ಅಲ್ಲಿನ ಹಿಂದುಗಳನ್ನು ಭಾರತಕ್ಕೆ ಕರೆಸಿ ದೇಶದ ವಿಂಗಡಣೆ ಮಾಡಲು ಸಲಹೆ ನೀಡಿದ್ದರು. ಯುವಕರು ನಮ್ಮ ಹಿಂದೂ ಧಾರ್ಮಿಕ ಉತ್ಸವಗಳ ಆಚರಣೆಗೆ ಮತ್ತು ಸನಾತನ ಹಿಂದೂ ಬೆಳೆಸಲು ಮುಂದಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಆರಾದ್ರಿ ಮಠದ ಡಾ. ವೇದಮೂರ್ತಿ ಮಹಾಂತೇಶ ಶಾಸ್ತ್ರೀಗಳು ವಹಿಸಿದ್ದರು. ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ವಿಜಯ ಮೆಟಗುಡ್, ಜೆಡಿಎಸ್ ಮುಖಂಡ ಶಂಕರ ಮಾಡಲಗಿ,ದಿಗ್ವಿಜಯ ಸಿದ್ನಾಳ,ಸಂತೋಷ ನವಲಗಟ್ಟಿ,ಕುಮಾರ ಹೋಗಾರ,ಸೋನಾ ಅಬ್ಬಾಯಿ, ಬಜರಂಗದಳ, ವಿ ಹೆಚ್ ಪಿ, ಬಿಜೆಪಿ ಮುಖಂಡರು, ಗಣೇಶ್ ಉತ್ಸವ ಕಮಿಟಿ ಸದಸ್ಯರು, ಕುಮಾರ ಗಣಾಚಾರಿ,ನಾಗರಾಜ ತಳವಾರ, ವಿಶ್ವನಾಥ್ ಅಡ್ಲಿಮಠ ಉಪಸ್ಥಿತರಿದ್ದರು. ರಾಜು ಬಡಿಗೇರ ಸ್ವಾಗತಿಸಿ, ವಂದಿಸಿದರು.