ಕಾಂಗ್ರೆಸ್‌ನಲ್ಲಿ ಯಾವುದೇ ಸಮನ್ವಯ ಕೊರತೆಯೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ಕಾಂಗ್ರೆಸ್‌ನಲ್ಲಿ ಯಾವುದೇ ಸಮನ್ವಯ ಕೊರತೆಯೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಸಮನ್ವಯ ಕೊರತೆಯೇ ಇಲ್ಲ. ಇಲ್ಲಿ ಇರುವುದು ಕಾಂಗ್ರೆಸ್ ಪಕ್ಷ ಒಂದೇ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.
ಅಥಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಸಮನ್ವಯ ಕೊರತೆಯೇ ಇಲ್ಲವೇ ಇಲ್ಲ. ಪಾರ್ಟಿ ಬಂದರೆ ಎಲ್ಲವೂ ಒಂದೇ. ನಮ್ಮಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಯಾವುದೇ ರೀತಿ ಅನ್ಯಾಯ ಆಗಿಲ್ಲ. ಎಲ್ಲರಿಗೂ ಟೈಮ್ ಬಂದೆ ಬರುತ್ತದೆ.  ಸರಿಯಾದ ಸಮಯಕ್ಕೆ ಎಲ್ಲರೂ ಕಾಯಬೇಕು ಅಷ್ಟೆ ಎಂದ ಅವರು, ಪಕ್ಷ ಗಟ್ಟಿಗೊಳ್ಳಿಸುವಲ್ಲಿ ಗಜಾನನ ಮಂಗಸೂಳಿ ಹಾಗೂ ಸದಾಶಿವ ಬುಟಾಳೆ ಪಾತ್ರ ಹೆಚ್ಚಿದೆ. ಮಂಗಸೂಳಿ ಅವರಿಗೆ ರಾಜಕೀಯ ಅವಕಾಶ ಮತ್ತೊಮ್ಮೆ ಬರುತ್ತದೆ ಎಂದು ಹೇಳಿದರು.
ಕೃಷ್ಣಾ ನದಿ ಪ್ರವಾಹ ಬೆಳೆ ಹಾನಿ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಕೃಷ್ಣಾ ನದಿ ಪ್ರವಾಹ ವೇಳೆ  ತುಂಬಾ ಬೆಳೆಗಳು ಹಾನಿ ಸಂಭವಿಸಿದೆ. ಆದರೆ ಇರಲ್ಲಿ ಮೂಖ್ಯವಾಗಿ  ಕಬ್ಬಿನ ಬೆಳೆ ಕಮರ್ಷಿಯಲ್ ಬೆಳೆ ಇರುದರಿಂದ ಕಬ್ಬು ಬೆಳೆಗಳಿಗೆ ಪರಿಹಾರ ಕೊಡುವುದಕ್ಕೆ ಬರುವುದಿಲ್ಲ. ಅಲ್ಲದೇ ಕ್ಷೇತ್ರದಲ್ಲಿ  ಇನ್ನು ಹಲವು ಬೆಳೆಗಳು ಸರ್ವೆ ಕಾರ್ಯ ಆಗಬೇಕು. ಇನ್ನು ನೀರು ಇರುವುದರಿಂದ ಸರ್ವೇ ಕಾರ್ಯ ವಿಳಂಬವಾಗುತ್ತಿದೆ.  ಸರ್ವೆ ಆದ ನಂತರ ಸರ್ಕಾರ ನಿಯಮದ ಪ್ರಕಾರ ಹಣ ಬರುತ್ತದೆ ಎಂದು ಹೇಳಿದರು.
ಮುಜರಾಯಿ ಇಲಾಖೆಯಿಂದ ದೇವಾಲಯಗಳು ಮುಕ್ತವಾಗಬೇಕು ಮಂತ್ರಾಲಯ ಶ್ರೀಗಳ ಹೇಳಿಕೆ ವಿಚಾರವಾಗಿ ಮಾತನಾಡದ ಅವರು, ಅದಕ್ಕೆ ಎಲ್ಲಾ ಉತ್ತರ ಕೊಡುವುದಕ್ಕೆ ಬರುದಿಲ್ಲ. ಅದು ಸಾರ್ವಜನಿಕ ವಿಚಾರ ಸರ್ಕಾರಕ್ಕೆ ಸಂಬಂಧವಿಲ್ಲ. ಎಲ್ಲಾ ದೇವಾಲಯಗಳು ಸ್ವತಂತ್ರವಾಗಿವೆ. ಕೆಲವು ದೇವಾಲಯಗಳು ಮಾತ್ರ ಸರ್ಕಾರದ ಅದಿನದಲ್ಲಿದೆ. ಹಲವು ದೇವಾಲಯಗಳು ಟ್ರಸ್ಟ್ ಮುಖಾಂತರ ನಡೆಯುತ್ತವೆ ಎಂದರು.
ತಿರುಪತಿ ಪ್ರವಾಸದಲ್ಲಿ ದನದ ಕೊಬ್ಬು ಹಾಕಿದ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾವು ಗೋಕಾಕ್ ಅಥಣಿ ಕುಳಿತು ಏನು ಹೇಳುವುದು. ಅವರು ಜಾಗೃತವಾಗಿ ಇರಬೇಕಿತ್ತು. ನಮಲ್ಲಿ ಹಿಂತ ಯಾವುದಾದರೂ ಕಂಡು ಬಂದರೆ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಾಟ ಪ್ರಕರಣ ಕುರಿತು ಮಾತನಾಡಿದ ಸಚಿವರು, ನಮ್ಮ ವಿರೋಧಿ ದೇಶದ ಧ್ವಜ ಹಾರಾಡಿದ್ರೆ ಕ್ರಮ ಮಾಡಬಹುದು.  ಎಲ್ಲಾ ಮುಸ್ಲಿಮ ಕಂಟ್ರಿ ಭಾರತ ದೇಶದ ವಿರೋಧಿಗಳಲ್ಲ. ಭಾರತದ ಜೊತೆಗೆ ಕೆಲವು ಮುಸ್ಲಿಂ ದೇಶಗಳು ಸ್ನೇಹ ಸಂಬಂಧ ಹೊಂದಿದೆ. ಎಲ್ಲಾ ಒಂದೇ ದೃಷ್ಟಿಯಿಂದ ನೋಡಬಾರದು. ದೇಶ ವಿರೋಧಿ ಚಟುವಟಿಕೆ ಇದ್ದರೆ ಕ್ರಮ ಕೈಗೊಳ್ಳಲಾಗುವುದು. ಅದರ ಬಗ್ಗೆ ಪೊಲಿಸ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ವಿಚಾರವಾಗೀ ಮಾತನಾಡಿದ ಅವರು,  ಕಾನೂನಿನಲ್ಲಿ ಯಾವ ರೀತಿ ಎಂಬುದು ಚರ್ಚೆ ಮಾಡಬೇಕು. ಹಿಂದಿನ ಸರ್ಕಾರ ಏನು ಕ್ರಮ ಮಾಡಲಿಲ್ಲ. ಕಾನೂನು ರೀತಿಯಲ್ಲಿ ಯಾವ ರೀತಿ ಇದೆ ಎಂಬುದನ್ನು ನೋಡಬೇಕು. ಮುಖ್ಯವಾಗಿ ಹಲವು ಹೋರಾಟ ಮಾಡಿದ್ದರೂ ಯತ್ನಾಳ್ಗೇ ಮೀಸಲಾತಿ ಕೊಡಿಸುದಕ್ಕೆ ಆಗ್ಲಿಲ್ಲ. ಹಿಂದೆ ಅವರದೆ ಸರ್ಕಾರ ಇತ್ತು ಏನ ಮಾಡಿದರು. ಮೂರು ದಿನದಲ್ಲಿ ಮೀಸಲಾತಿ ಕೊಡುವುದಕ್ಕೆ ಬರುವುದಿಲ್ಲ.
ಕಾನೂನು ನಮ್ಮ ಕೈಯಲ್ಲಿ ಇಲ್ಲ. ಅದರ ಚೌಕಟ್ಟಿನಲ್ಲಿ ಮೀಸಲಾತಿ ನೀಡಲಾಗುವುದು. ರಾಜಕೀಯ ಭಾಷಣದಿಂದ ಪರಿಹಾರ ಸಿಗುವುದಿಲ್ಲ ಎಂದರು.
WhatsApp Group Join Now
Telegram Group Join Now
Share This Article