ವೈಯಾಲಿಕಾವಲ್ ಹತ್ಯೆ ಪ್ರಕರಣ; ಹಂತಕ ಶೀಘ್ರಗತಿ ಬಂಧನ ಅತ್ಯಗತ್ಯ ಎಂದ ತಜ್ಞರು

Ravi Talawar
ವೈಯಾಲಿಕಾವಲ್ ಹತ್ಯೆ ಪ್ರಕರಣ; ಹಂತಕ ಶೀಘ್ರಗತಿ ಬಂಧನ ಅತ್ಯಗತ್ಯ ಎಂದ ತಜ್ಞರು
WhatsApp Group Join Now
Telegram Group Join Now

ಬೆಂಗಳೂರು: ವೈಯಾಲಿಕಾವಲ್‌ನ ಬಸಪ್ಪ ಗಾರ್ಡನ್‌ 5ನೇ ಕ್ರಾಸ್‌ನ ಪೈಪ್‌ಲೈನ್‌ ರಸ್ತೆಯ ಮನೆಯಲ್ಲಿ ನಡೆದಿದ್ದ ಮಹಾಲಕ್ಷ್ಮಿ(29) ಅವರ ಕೊಲೆ ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಈ ನಡುವಲ್ಲೇ ಹಂತಕ ಸಡೋಮಾಸೋಕಿಸ್ಟ್ ನಂತೆ ತೋರುತ್ತಿದ್ದು ಆತನನ್ನು ಶೀಘ್ರಗತಿಯಲ್ಲಿ ಬಂಧಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಹಂತಕ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ, ಶನಿವಾರ ಸಂಜೆ ಪರಿಶೀಲನೆ ನಡೆಸಿದಾಗ 30 ತುಂಡಾಗಿ ಕತ್ತರಿಸಲಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಭಾನುವಾರ ನಡೆದ ಮರಣೋತ್ತರ ಪರೀಕ್ಷೆ ವೇಳೆ, 59 ತುಂಡಾಗಿ ಕತ್ತರಿಸಲಾಗಿದೆ ಎಂಬುದು ದೃಢಪಟ್ಟಿದೆ. ಅಲ್ಲದೆ, ಮಹಿಳೆಯ ತಲೆಯನ್ನೂ ಮೂರು ಭಾಗವಾಗಿ ಮಾಡಿದ್ದು, ಮಹಿಳೆಯ ಕಾಲುಗಳನ್ನು ಕತ್ತರಿಸಲಾಗಿತ್ತು. ಕರುಳು, ತಲೆಯ ಕೂದಲು ಸೇರಿದಂತೆ ಇತರೆ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಹಂತಕ ಎರಡು ಕಾರಣಗಳಿಂದ ದೇಹವನ್ನು ತುಂಡಾಗಿಸಿರಬಹುದು. ಮೃತದೇಹವನ್ನು ಸುಲಭವಾಗಿ ವಿಲೇವಾರಿ ಮಾಡುವ ಉದ್ದೇಶ ಅಥವಾ ದೇಹ ತುಂಡರಿಸುವ ವೇಳೆ ಆನಂದ ಪಟ್ಟಿರುವ ಸಾಧ್ಯತೆಗಳಿವೆ. ಒಂದು ದೇಹವನ್ನು ತುಂಡರಿಸಲು ಸಮಯ ಹಾಗೂ ಕೌಶಲ್ಯದ ಅಗತ್ಯವಿರುತ್ತದೆ. ಈ ಪ್ರಕರಣದಲ್ಲಿ ಹಂತಕ ಸಡೋಮಾಸೋಕಿಸ್ಟಿಕ್ ಪ್ರವೃತ್ತಿಯನ್ನು ಹೊಂದಿರುವ ಸಾಧ್ಯತೆಗಳನ್ನು ತೋರಿಸುತ್ತಿದೆ.

WhatsApp Group Join Now
Telegram Group Join Now
Share This Article