ಮಲ್ಲಾಪೂರ ಅರ್ಬನ ಬ್ಯಾಂಕ ವಾರ್ಷಿಕ 27.17  ಲಕ್ಷ ರೂ. ಲಾಭ: ರಮೇಶ ತುಕ್ಕಾನಟ್ಟಿ 

Ravi Talawar
ಮಲ್ಲಾಪೂರ ಅರ್ಬನ ಬ್ಯಾಂಕ ವಾರ್ಷಿಕ 27.17  ಲಕ್ಷ ರೂ. ಲಾಭ: ರಮೇಶ ತುಕ್ಕಾನಟ್ಟಿ 
WhatsApp Group Join Now
Telegram Group Join Now
ಘಟಪ್ರಭಾ. ಬ್ಯಾಂಕಿನ ಆಡಳಿತ ಮಂಡಳಿಯ ಸಹಕಾರ ಮತ್ತು ಸಿಬ್ಬಂದಿ ವರ್ಗದ ಶ್ರಮ ಶೇರು ಸದಸ್ಯರ ಸಹಕಾರದಿಂದ  ಮಲ್ಲಾಪೂರ ಅರ್ಬನ ಬ್ಯಾಂಕು 2023-2024 ನೇ  ಸಾಲಿನಲ್ಲಿ  ನಿವ್ವಳ ರೂ. 27.17 ಲಕ್ಷ ಲಾಭ ಗಳಿಸಿ ಅಪಾರ ಸಾಧನೆ ಮಾಡಿದೆ ಎಂದು ದಿ  ಮಲ್ಲಾಪೂರ ಅರ್ಬನ ಕೋ ಅಪ್ ಬ್ಯಾಂಕ ನಿ. ಘಟಪ್ರಭಾ ಇದರ ಅಧ್ಯಕ್ಷರಾದ ರಮೇಶ ಮಲ್ಲಪ್ಪ. ತುಕ್ಕಾನಟ್ಟಿ ಹೇಳಿದರು.
ಅವರು ಶುಕ್ರವಾರದಂದು ನಡೆದ 2023-2024 ನೇ ಸಾಲಿನ 58 ನೇ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಬ್ಯಾಂಕ ಎಲ್ಲ ಹಂತಗಳಲ್ಲಿ ಉನ್ನತ ಮಟ್ಟದ ಗ್ರಾಹಕರಿಗೆ  ಸೇವೆ ನೀಡುತ್ತಿದ್ದು, ಈ ವರ್ಷ ಸದಸ್ಯರಿಗೆ 15% ಲಾಭಾoಶ ಅಕ್ಟೋಬರ ತಿಂಗಳಲ್ಲಿ ಜಮಾ ಮಾಡಲಾಗುವದು, ಬ್ಯಾಂಕಿನ ಸ್ಥಾಪನೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ ದಿವಂಗತ ಹಿರಿಯರ ಪುತ್ತಳಿ ನಿರ್ಮಾಣ, ಬ್ಯಾಂಕಿನ ಮೇಲಿನ ಮಹಡಿಯಲ್ಲಿ     ಶ್ರೀ ಮಲ್ಲಪ್ಪ ಸಭಾಭವನ ನಿರ್ಮಾಣ, ಬ್ಯಾಂಕ ನಿವೇಶನ ಪಡೆಯಲು ಕೋರ್ಟ್ ಹೋರಾಟ ಮಾಡುತ್ತಿದ್ದು ಅದಕ್ಕೆ ನಾವು ಕಾಯಬೇಕು ಎಂದರು.
ಬ್ಯಾಂಕಿನ ವ್ಯವಸ್ಥಾಪಕರಾದ ರಮೇಶ್ ಶಿ. ಮುರಗೋಡ  ವರದಿ ವಚನ ಮಾಡಿ ಮಾತನಾಡಿ  2023-24 ನೇ ಸಾಲಿನಲ್ಲಿ  ದುಡಿಯುವ ಬಂಡವಾಳ 2846.13 ಲಕ್ಷ ರೂಪಾಯಿಗಳು, ಶೇರು ಬಂಡವಾಳ ರೂ. 96.94 ಲಕ್ಷ, ಠೇವಣಿ ರೂ. 2270.69 ಲಕ್ಷ, ಸಾಲ ನೀಡಿದ್ದು ರೂ 1523.39 ಲಕ್ಷ ಮತ್ತು  2023-24 ನೇ ವರ್ಷಕ್ಕೆ  27.17 ಲಕ್ಷ ರೂಪಾಯಿಗಳ  ನಿವ್ವಳ ಲಾಭ ಗಳಿಸಿದೆ ಎಂದರು.
 ಈ ಸಭೆಯಲ್ಲಿ ಹಿರಿಯರಾದ ಶಂಕರ ಹತ್ತರವಾಟ, ಶ್ರೀಕಾಂತ ಮಹಜನ,ಮಲ್ಲಾಪೂರ  ಪಿಕೆಪಿಎಸ್ ಅಧ್ಯಕ್ಷ  ಮುತ್ತಣ್ಣ ಹತ್ತರವಾಟ, ಸದಾಶಿವ ಹಿರೇಮಠ   ಬ್ಯಾಂಕಿನ ಆಗು ಹೋಗುಗಳ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಬ್ಯಾಂಕ ಉಪಾಧ್ಯಕ್ಷರಾದ  ಹೊನ್ನಜ್ಜ ಚ. ಕೋಳಿ, ನಿವೃತ್ತ ಬ್ಯಾಂಕ ವ್ಯವಸ್ಥಾಪಕರಾದ ಗೋವಿಂದ ತುಕ್ಕಾನಟ್ಟಿ, ಹಿರಿಯರಾದ ಅಲ್ಲಪ್ಪ ಹುಕ್ಕೇರಿ, ವ್ಯವಸ್ಥಾಪಕರಾದ ಟಿ ಎಸ್. ಹರಗಾಪೂರ, ಎ ಕೆ. ಚೌಗಲಾ  ಎಲ್ಲ ಆಡಳಿತ ಮಂಡಳಿ ಸದಸ್ಯರು, ಶೇರು ಸದಸ್ಯರು, ಗ್ರಾಹಕರು, ಘಟಪ್ರಭಾ ಪಟ್ಟಣದ ಹಿರಿಯರು, ಸಾರ್ವಜನಿಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಶೃತಿ ಮಂಟೂರ, ಸ್ವಾಗತ ಸಂತೋಷ ಹತ್ತರವಾಟ, ವಂದನೆ ಕಿರಣ ಕಬಾಡಗಿ, ಇಂಗ್ಲಿಷ್ ವರದಿಯನ್ನು ರವಳು ನೆವಗಿರೆ ನೆರವೇರಿಸಿದರು. ರಾಜು ಜಂಬರಿ ವಂದಿಸಿದರು.
WhatsApp Group Join Now
Telegram Group Join Now
Share This Article