ಬೆಂಗಳೂರಿನಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್, ಓರ್ವರಲ್ಲಿ ನಿಫಾ ಗುಣಲಕ್ಷಣ ಪತ್ತೆ

Ravi Talawar
ಬೆಂಗಳೂರಿನಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್, ಓರ್ವರಲ್ಲಿ ನಿಫಾ ಗುಣಲಕ್ಷಣ ಪತ್ತೆ
WhatsApp Group Join Now
Telegram Group Join Now

ಬೆಂಗಳೂರು, ಸೆ.21: ಸಿಲಿಕಾನ್ ಸಿಟಿ ಬೆಂಗಳೂರು  ಜನರೇ ಎಚ್ಚರ ಎಚ್ಚರ. ನೀವು ಕೊಂಚ ಯಾಮಾರಿದ್ರೂ ಮತ್ತೆ ಹೋಮ್ ಕ್ವಾರಂಟೈನ್ ಆತಂಕ ಶುರುವಾಗಲಿದೆ. ಕೋವಿಡ್ ಟೈಮ್​ನಲ್ಲಿ ಕ್ವಾರಂಟೈನ್ ಜನರ ಜೀವ ಹಿಂಡಿತ್ತು. ಇದೀಗ ರಾಜ್ಯದಲ್ಲಿ ನಿಫಾ  ಜೊತೆಗೆ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು ಮತ್ತೆ ಹೋಮ್ ಕ್ವಾರಂಟೈನ್​ ಶುರುವಾಗಲಿದೆ. ತಮ್ಮನ್ನು ತಾವೇ ದಿಗ್ಬಂಧನಕ್ಕೆ ಒಳಗಾಗಬೇಕಾಗುವ ಸಮಯಬರಬಹುದು.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ‌ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ‌ ಐಸೊಲೇಷನ್ ಮಾಡಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.
WhatsApp Group Join Now
Telegram Group Join Now
Share This Article