ಮಂಗಳೂರು ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಭಾನುಮತಿ ಅವರು ಆಯ್ಕೆ

Ravi Talawar
ಮಂಗಳೂರು ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಭಾನುಮತಿ ಅವರು ಆಯ್ಕೆ
WhatsApp Group Join Now
Telegram Group Join Now

ಮಂಗಳೂರು, ಸೆ.19: ಮಂಗಳೂರು ಮಹಾನಗರ ಪಾಲಿಕೆಯ  25ನೇ ಅವಧಿಯ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಭಾನುಮತಿ ಅವರು ಆಯ್ಕೆಯಾಗಿದ್ದಾರೆ. ಇನ್ನು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಕೂಡ ಶುರುವಾಗಿದೆ. ಚುನಾವಣೆ ಬಳಿಕ ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಗದ್ದಲ ಶುರುವಾಗಿದೆ.

ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ನ ಒಬ್ಬರು ಸದಸ್ಯರು, 2 ಕಾಂಗ್ರೆಸ್ MLC ಗಳು ಗೈರಾಗಿದ್ದು ಉಪಮೇಯರ್ ಅಭ್ಯರ್ಥಿ ಬಿಜೆಪಿಯ ಭಾನುಮತಿಗೆ ಒಟ್ಟು 47 ಮತ ಹಾಗೂ ಕಾಂಗ್ರೆಸ್ ನ ಝೀನತ್ ಶಂಶುದ್ದೀನ್ ಗೆ 14 ಮತ ಬಂದಿದೆ. ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಭಾನುಮತಿಗೆ ಜಯ ಸಿಕ್ಕಿದೆ. ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್‌ಗೆ ಹಿಂದುಳಿದ ವರ್ಗ ಎ ಮೀಸಲಿಡಲಾಗಿತ್ತು. ಹಾಲಿ ಆಡಳಿತದ ಅವಧಿ ಐದುತಿಂಗಳು ಮಾತ್ರ ಆಗಿದೆ. ಈ ಬಾರಿ ಹಾಲಿ ಪಾಲಿಕೆ ಆಡಳಿತದ ಕೊನೆ ಅವಧಿಯ ಆಯ್ಕೆ ಇದಾಗಿದೆ.

ಇನ್ನು ಮತ್ತೊಂದೆಡೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಮುಗಿದ್ದ ಬೆನ್ನಲ್ಲೇ ಸಂಘರ್ಷ ಶುರುವಾಗಿದೆ. ಪಾಲಿಕೆ ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಕಿತ್ತಾಡಿಕೊಂಡಿದ್ದಾರೆ. ಮಾಜಿ‌ ಮೇಯರ್ ಅಭಿನಂದನಾ ಭಾಷಣ ಸಂದರ್ಭ ನೂತನ ಮೇಯರ್- ಉಪಮೇಯರ್ ಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್ ಸದಸ್ಯರು ತೆರಳಿದರು. ಭಾಷಣದ ಮಧ್ಯೆ ಎದ್ದು ಹೋಗಿದ್ದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಪರಿಶಿಷ್ಟ ಜಾತಿಯ ಮೇಯರ್ ಅವರಿಗೆ ಅವಮಾನ ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ನೂತನ ಮೇಯರ್-ಉಪಮೇಯರ್ ಗೆ ಅಭಿನಂದನೆ ವೇಳೆ ಮಾತಿನ ಚಕಮಕಿ ನಡೆದಿದ್ದು ಸಭಾಂಗಣದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

WhatsApp Group Join Now
Telegram Group Join Now
Share This Article