ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ ವಾಗ್ದಾಳಿ

Ravi Talawar
ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ ವಾಗ್ದಾಳಿ
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಹರೀಶ್ ಪೂಂಜ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಶಾಸಕ, ಸಂಸದರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಾಗೆಂದು ಕಾಂಗ್ರೆಸ್​ ನಾಯಕ ಐವನ್ ಡಿಸೋಜಾ ನೀಡಿದ ಹೇಳಿಕೆ ಮೇಲೆ ಕ್ರಮ ಆಗಲಿಲ್ಲ ಎಂದರು.

ಗಣೇಶ ಮೂರ್ತಿಯನ್ನೇ ಪೊಲೀಸ್ ವ್ಯಾನ್​ನಲ್ಲಿ ಕರೆದುಕೊಂಡು ಹೋದರು. ಇದು ದೇಶದಲ್ಲೇ ಮೊದಲು. ಗಣಪತಿಗೇ ವಿಘ್ನ ಮಾಡಿದರು. ಚಪ್ಪಲಿ ಬಿಸಾಡಿದರು, ಕಲ್ಲು ಎಸೆದರು, 25 ಅಂಗಡಿ ಸುಟ್ಟು ಹಾಕಿದರು. ಅವರಿಗೆ ಎಲ್ಲಿಂದ ಶಕ್ತಿ ಬಂತು? ಕೇರಳದವರು ಬಂದಿದ್ದಾರೆ ಎಂದಬುದು ಗೊತ್ತಾಗಿದೆ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article