ಹುಕ್ಕೇರಿ: ವಿವಿಧ ವಿಭಾಗದಲ್ಲಿ ತೇರ್ಗಡೆಯಾದ ವಿದ್ಯಾರ್ಥೀಗಳಿಗೆ ಸ್ಥಳದಲ್ಲಿ ಉದ್ಯೋಗ ಆಯ್ಕೆ ಮಾಡಿಕೊಳ್ಳಲು ಬೆಲ್ಲದ ಬಾಗೇವಾಡಿಯ ವಿ. ಎಮ್ ಕತ್ತಿ ಗ್ರೂಪ್ ಸಂಸ್ಥೆಯ ಆವರಣದಲ್ಲಿ ಸೆಪ್ಟೆಂಬರ್ 21 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಿಕ್ಷಣ
ಸಂಸ್ಥೆಯ ಚೇರಮನ್ ಪವನ ಕತ್ತಿ ತಿಳಿಸಿದ್ದಾರೆ.
ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿದ್ಯಾ ಟ್ರಸ್ಟ್,ಹಾಗೂ ವಿಶ್ವನಾಥ ಮಲ್ಲಪ್ಪಾ ಕತ್ತಿ ಸ್ಮಾರಕ ಧರ್ಮಾರ್ಥ ಟ್ರಸ್ಟ್ ಮತ್ತು ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯಕೇಂದ್ರ ಎಂ.ಸಿ.ಸಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹತ್ತನೆ ತರಗತಿಯಿಂದ ಐಟಿಐ ಡಿಪ್ಲೋಮಾ,
ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಹರ್ತೆ ಪಡೆದ ವಿದ್ಯಾಥಿಗಳು ಭಾಗವಹಿಸಬಹುದು
ಈ ಮೇಳದಲ್ಲಿ ಸುಮಾರು ೩೫ ಕ್ಕಿಂತ ಹೆಚ್ಚು ಬೇರೆ ಬೇರೆ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಲೊಳ್ಳಲಿರುವುದಾಗಿ ತಿಳಿಸಿದರು.
ಜಿಲ್ಲೆಯ ಅಭ್ಯ ರ್ಥಿಗಳು ತಮ್ಮ ಸ್ವವಿವರ (ಬಯೋಡಾಟಾ) ದೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ, ಅಭ್ಯರ್ಥಿಗಳು ಕ್ಯೂಆರ್ ಕೋಡ್ ಮೂಲಕವು ಅರ್ಜಿ ಸಲ್ಲಿಸಲೂ ಅವಕಾಶ ಕಲ್ಪಸಲಾಗಿದೆ,
ಉಚಿತ ಶಿಬಿರ – ಉದ್ಯೋಗ ಮೇಳವನ್ನು ಪ್ರತಿ ವರ್ಷವು ಜಿಲ್ಲೇಯ ಯುವಕರಿಗೆ ಉದ್ಯೋಗ ಕಲ್ಪಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿ, ಕಳೆದ ವರ್ಷ ಏಂಟು ನೂರು ಯುವಕರು ಉದ್ಯೋಗ ಪಡೆದುಕೊಂಡಿದ್ದಾರೆ. ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ಪದವಿ ಮಹಾವಿಧ್ಯಾಲಯದ ಪ್ರಾಚಾರ್ಯ ಡಾ. ವಿ.ಎಮ್. ಹೂಗಾರ, ಪಿಯುಸಿ ಕಾಲೇಜಿನ ಪ್ರಾಚಾರ್ಯ ಎಸ್.ಎಮ್. ಭಂಗಿ, ಐಟಿಐ ಕಾಲೇಜಿನ ಪ್ರಾಚಾರ್ಯ ವೈ.ಡಿ. ತೋರೊ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಂತೋಷ್, ಎನ್ ಹಾಗೂ ವಿಶ್ವರಾಜ ಶುಗರ್ಸ್ ಎಚ್.ಆರ್ ರಾಘವೇಂದ್ರ ನಂದಗಾವಿ ಇದ್ದರು.