ಪಾಂಡವಪುರದಲ್ಲಿ ತಡರಾತ್ರಿ ಭಾರೀ ಹೈಡ್ರಾಮಾ: RSS ಕಾರ್ಯಾಲಯಕ್ಕೆ ನುಗ್ಗಿದ ಪೊಲೀಸರು, ಹಲವರು ವಶಕ್ಕೆ?

Ravi Talawar
ಪಾಂಡವಪುರದಲ್ಲಿ ತಡರಾತ್ರಿ ಭಾರೀ ಹೈಡ್ರಾಮಾ: RSS ಕಾರ್ಯಾಲಯಕ್ಕೆ ನುಗ್ಗಿದ ಪೊಲೀಸರು, ಹಲವರು ವಶಕ್ಕೆ?
WhatsApp Group Join Now
Telegram Group Join Now

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರದ ಆರ್‌ಎಸ್‌ಎಸ್ ಕಾರ್ಯಾಲಯಕ್ಕೆ ಭಾನುವಾರ ತಡರಾತ್ರಿ ನುಗ್ಗಿದ ಪೊಲೀಸರು, ಸಂಘದ ಹಲವು ಪ್ರಚಾರಕರನ್ನು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದ್ದು, ಈ ಘಟನೆಗೆ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಮಂಡ್ಯ ಜಿಲ್ಲೆಯ ಪಾಂಡವಪುರದ ಆರ್‌ಎಸ್‌ಎಸ್ ಕಾರ್ಯಾಲಯಕ್ಕೆ ರಾತ್ರೋರಾತ್ರಿ ಪೊಲೀಸರು ನುಗ್ಗಿ, ಸಂಘದ ಪ್ರಚಾರಕರ ಮೇಲೆ ದೌರ್ಜನ್ಯ ನಡೆಸಿದ್ದು ಅಕ್ಷಮ್ಯ.ಸಂಘದ ಕಾರ್ಯಾಲಯಕ್ಕೆ ಸಕಾರಣವಿಲ್ಲದೆ ದಾಳಿ ನಡೆಸಿದ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ.

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರಾಜಕತೆ ಹೆಚ್ಚಾಗಿದ್ದು, ಹಿಂದೂಗಳನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಸನ್ನಿವೇಶ ಸೃಷ್ಟಿಸುತ್ತಿದೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಅಸ್ಥಿರತೆ ಮೂಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಹಿಂದೂಗಳಿಗೆ ಬಹಿರಂಗ ಸವಾಲು ಎಸೆಯುವ ಮತಾಂಧರನ್ನು ಸ್ವತಂತ್ರವಾಗಿರಲು ಬಿಟ್ಟು, ರಾಷ್ಟ್ರಭಕ್ತ ಸ್ವಯಂಸೇವಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕಾಂಗ್ರೆಸ್ಸಿನ ಹಿಟ್ಲರ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದೆ.

ನಾಗಮಂಗಲ ಗಲಭೆಯಲ್ಲಿ ಆರ್ಎಸ್ಎಸ್ ಮುಖಂಡರ ಬಂಧನ ಖಂಡಿಸಿ ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇದೇ ವೇಲೆ RSS ಕಾರ್ಯಾಲಯದ ಒಳ ನುಗ್ಗಿರುವ ಪೊಲೀಸರು ಸಂಘ ಕೆಲ ಮುಖಂಡರನ್ನ ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article