ಸೈಬರ್ ವಂಚನೆ ಪ್ರಕರಣಗಳನ್ನು ತಗ್ಗಿಸಲು ‘ಸಿಎಫ್‌ಎಂಸಿ’ಗೆ ಗೃಹ ಸಚಿವ ಅಮಿತ್ ಶಾ ಚಾಲನೆ

Ravi Talawar
ಸೈಬರ್ ವಂಚನೆ ಪ್ರಕರಣಗಳನ್ನು ತಗ್ಗಿಸಲು ‘ಸಿಎಫ್‌ಎಂಸಿ’ಗೆ ಗೃಹ ಸಚಿವ ಅಮಿತ್ ಶಾ ಚಾಲನೆ
WhatsApp Group Join Now
Telegram Group Join Now

ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ದ ಮೊದಲ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು, ಸೈಬರ್ ಅಪರಾಧಗಳನ್ನು ತಡೆಗಟ್ಟುವ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು.

ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರ (ಸಿ ಎಫ್‌ ಎಂ ಸಿ) ಕ್ಕೆ ಚಾಲನೆ ಮಂಗಳವಾರ ನೀಡಿದರು.ಸಮನ್ವಯ ವೇದಿಕೆ (ಜಂಟಿ ಸೈಬರ್ ಅಪರಾಧ ತನಿಖಾ ನೆರವು ವ್ಯವಸ್ಥೆ), ‘ಸೈಬರ್ ಕಮಾಂಡೋಸ್’ ಮತ್ತು ಶಂಕಿತ ದಾಖಲಾತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ I4C ಯ ಹೊಸ ಲೋಗೋ, ದೃಷ್ಟಿ ಮತ್ತು ಮಿಷನ್ ಅನ್ನು ಸಹ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪಕ್ರಮದ ಮೇರೆಗೆ ಸುರಕ್ಷಿತ ಸೈಬರ್ ಸ್ಪೇಸ್ ಅಭಿಯಾನದ ಅಡಿಯಲ್ಲಿ ಪ್ರಾರಂಭಿಸಲಾದ I4C ಇಂದು ದೇಶದ ಸೈಬರ್ ಭದ್ರತೆಯ ಬಲವಾದ ಆಧಾರಸ್ತಂಭವಾಗಿದೆ ಇಂದು ಪ್ರಾರಂಭಿಸಲಾದ ‘I4C’ ಯ ನಾಲ್ಕು ಪ್ರಮುಖ ಉಪಕ್ರಮಗಳು ಸೈಬರ್ ಅಪರಾಧ ವಿರುದ್ಧದ ಹೋರಾಟವನ್ನು ಹೆಚ್ಚು ಬಲವಾಗಿಸಲು, ಪರಿಣಾಮಕಾರಿಯಾಗಿಸಲು ಮತ್ತು ಯಶಸ್ವಿಯಾಗಿಸಲು ದೊಡ್ಡ ಕೊಡುಗೆ ನೀಡುತ್ತವೆ ಎಂದರು.

ಸೈಬರ್ ಭದ್ರತೆಯು ಡಿಜಿಟಲ್ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ, ರಾಷ್ಟ್ರೀಯ ಭದ್ರತೆಯ ಪ್ರಮುಖ ಅಂಶವೂ ಆಗಿದೆ. ಯಾವುದೇ ಒಂದು ಸಂಘಟನೆ ಅಥವಾ ಸಂಸ್ಥೆಯು ಸೈಬರ್ ಜಾಗವನ್ನು ಸುರಕ್ಷಿತವಾಗಿರಿಸಲು ಸಾಧ್ಯವಿಲ್ಲ, ಎಲ್ಲಾ ಪಾಲುದಾರರು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು ಮತ್ತು ಉದ್ದೇಶ ಸಾಧನೆಗಾಗಿ ಒಟ್ಟಾಗಿ ಕೆಲಸ ಮಾಡಬೇಕು

ರಾಷ್ಟ್ರ ಮಟ್ಟದಲ್ಲಿ ಶಂಕಿತ ದಾಖಲಾತಿಯನ್ನು ರಚಿಸುವುದು ಮತ್ತು ಅದರೊಂದಿಗೆ ರಾಜ್ಯಗಳನ್ನು ಸಂಪರ್ಕಿಸುವುದು ಸೈಬರ್ ಅಪರಾಧವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 5 ವರ್ಷಗಳಲ್ಲಿ ಸುಮಾರು 5 ಸಾವಿರ ಸೈಬರ್ ಕಮಾಂಡೋಗಳನ್ನು ಸಿದ್ಧಗೊಳಿಸಲಾಗುವುದು. ಮೂರು ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ದೇಶವನ್ನು ಸೈಬರ್ ಸುರಕ್ಷಿತವಾಗಿಸಲು ಎಲ್ಲಾ ಕಾನೂನು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಬ್ಯಾಂಕ್‌ ಗಳು, ಹಣಕಾಸು ಸಂಸ್ಥೆಗಳು, ಟೆಲಿಕಾಂ ಕಂಪನಿಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಪೊಲೀಸರನ್ನು ಒಂದೇ ವೇದಿಕೆಯಲ್ಲಿ ತರುವ ಆಲೋಚನೆಯೊಂದಿಗೆ ಸಿ ಎಫ್‌ ಎಂ ಸಿ ಯನ್ನು ಸಹ ಪ್ರಾರಂಭಿಸಲಾಗಿದೆ

WhatsApp Group Join Now
Telegram Group Join Now
Share This Article