ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಶೇ.20 ರಷ್ಟು ಇಳಿಕೆ!

Ravi Talawar
ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಶೇ.20 ರಷ್ಟು ಇಳಿಕೆ!
WhatsApp Group Join Now
Telegram Group Join Now

ಅಯೋಧ್ಯೆ: ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಶೇ.20ರಷ್ಟು ಇಳಿಕೆ ಕಂಡುಬಂದಿದೆ ಎಂದು ಅಯೋಧ್ಯೆಯ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಈ ಕುರಿತು ಅಮರ್​ ಉಜಾಲಾ ಸುದ್ದಿ ಮಾಡಿದ್ದು, ಪ್ರವಾಸೋದ್ಯಮ ಉತ್ತಮವಾಗಿದ್ದರೂ ಕೂಡ ಏಪ್ರಿಲ್​ನಿಂದ ಅದರ ವೇಗ ಕಡಿಮೆಯಾಗಿದೆ. ಅರ್ಥಶಾಸ್ತ್ರಜ್ಞ ಪ್ರೊ.ವಿನೋದ್ ಶ್ರೀವಾಸ್ತವ ಮಾತನಾಡಿ, ಕಳೆದ ಕೆಲವು ತಿಂಗಳುಗಳಿಂದ ತಮ್ಮ ಸಮೀಕ್ಷೆಯ ಆಧಾರದ ಮೇಲೆ ಹೇಳುವುದಾದರೆ ಭಕ್ತರು ಅಯೋಧ್ಯೆಗೆ ದರ್ಶನಕ್ಕೆ ಬರುತ್ತಿದ್ದಾರೆ, ಆದರೆ ಬಹಳ ಕಡಿಮೆ ಖರ್ಚು ಮಾಡುತ್ತಿದ್ದಾರೆ ಎಂದರು.

ಪ್ರಾಣಪ್ರತಿಷ್ಠೆ ಬಳಿಕ ಏಪ್ರಿಲ್​ವರೆಗೆ ಸುಮಾರು ಒಂದೂವರೆ ಲಕ್ಷ ಮಂದಿ ಪ್ರತಿದಿನ ಅಯೋಧ್ಯೆಗೆ ಬರುತ್ತಿದ್ದರು. ಈಗ ಭಕ್ತರ ಸಂಖ್ಯೆ ಶೇ.20ರಷ್ಟು ಕಡಿಮೆಯಾಗಿದೆ. ಅಯೋಧ್ಯೆಯ ಒಟ್ಟು ರಾಜ್ಯದ ಆಂತರಿಕ ಉತ್ಪನ್ನಕ್ಕೆ ಪ್ರವಾಸಿಗರು ನೀಡುವ ಆದಾಯದಲ್ಲಿ ಅಲ್ಪಾವಧಿಯ ಕುಸಿತ ಕಂಡುಬಂದಿದೆ.

 

WhatsApp Group Join Now
Telegram Group Join Now
Share This Article