ಸಾಕ್ಷರತಾ ಪ್ರಮಾಣ ಹೆಚ್ಚಿದಷ್ಟು ಸುಸ್ಥಿರ ಸಮಾಜ ಸಾಧ್ಯ: ಗಾಯತ್ರಿ ಅಜ್ಜಣ್ಣವರ

Ravi Talawar
ಸಾಕ್ಷರತಾ ಪ್ರಮಾಣ ಹೆಚ್ಚಿದಷ್ಟು ಸುಸ್ಥಿರ ಸಮಾಜ ಸಾಧ್ಯ: ಗಾಯತ್ರಿ ಅಜ್ಜಣ್ಣವರ
WhatsApp Group Join Now
Telegram Group Join Now

ಎಂ.ಕೆ.ಹುಬ್ಬಳ್ಳಿ: ಸುಸ್ಥಿರ ಸಮಾಜವನ್ನು ನಿರ್ಮಿಸಲು ಸಾಕ್ಷರತೆಯ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಿತ್ತೂರು ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜಣ್ಣವರ ಹೇಳಿದರು.

ದಾಸ್ತಿಕೊಪ್ಪ ಗ್ರಾಮದ ಗ್ರಂಥಾಲಯದಲ್ಲಿ ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ 58 ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿದರು.

ಇತ್ತೀಚೆಗೆ ಇಲಾಖೆ ಸಹಯೋಗದಲ್ಲಿ ನಡೆದ ಸಮೀಕ್ಷೆಯಲ್ಲಿ ಸಾಕ್ಷರತಾ ಪ್ರಮಾಣ ಅತಿ ಹೆಚ್ಚಾಗಿದ್ದು, 75.60% ರಷ್ಟು ಹೆಚ್ಚಿದ್ದು ಸಂಪೂರ್ಣ ಪ್ರಮಾಣದಲ್ಲಿ ಸಾಕ್ಷರರನ್ನಾಗಿಸುವ ನಿಟ್ಟಿನಲ್ಲಿ ಇಲಾಖೆ ವಯಸ್ಕರ ಶಿಕ್ಷಣಕ್ಕೆ ಆದ್ಯತೆ ನೀಡಿ ದೈನಂದಿನ ಕನಿಷ್ಠ ಓದು ಬರಹ ಲೆಕ್ಕಾಚಾರ ಮಾಡಲು ಅಗತ್ಯ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.

ಗ್ರಾಂ.ಪಂ ಉಪಾಧ್ಯಕ್ಷರಾದ ಉಮೇಶ ಸಿದ್ರಾಮನಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯರಾಮ ಕಾದ್ರೊಳ್ಳಿ, ಮುಖ್ಯೋಪಾಧ್ಯಾಯ ಕೆ.ಡಿ.ಹೊಳಿ, ಎಂ.ಎಸ್ ಕಲ್ಮಠ, ಶಿಕ್ಷಕಿಯರಾದ ನಿರ್ಮಲಾ ಜುಟ್ಟನವರ, ಸಲ್ಮಾ ಮುಲ್ಲಾ, ಮೊದಲಾದವರು ಉಪಸ್ಥಿತರಿದ್ದರು. ಬಿ.ಆರ್.ಪಿ ಕುರಬೇಟ ನಿರೂಪಿಸಿದರು. ಸಿ.ಆರ್.ಪಿ ವಿನೋದ ಪಾಟೀಲ ವಂದಿಸಿದರು.

WhatsApp Group Join Now
Telegram Group Join Now
Share This Article