ಸತ್ಯ ಶುದ್ಧ ಕಾಯಕ ಮಾಡಿ ಬಂದ ಸಂಪತ್ತಿನಲ್ಲಿ ಧಾನ ಧರ್ಮ ಮಾಡಿ : ಜಯ ಮೃತ್ಯುಂಜಯ ಸ್ವಾಮೀಜಿ

Chandrashekar Pattar
ಸತ್ಯ ಶುದ್ಧ ಕಾಯಕ ಮಾಡಿ ಬಂದ ಸಂಪತ್ತಿನಲ್ಲಿ ಧಾನ ಧರ್ಮ ಮಾಡಿ : ಜಯ ಮೃತ್ಯುಂಜಯ ಸ್ವಾಮೀಜಿ
Oplus_131072
WhatsApp Group Join Now
Telegram Group Join Now

ಮೂಡಲಗಿ: ಸತ್ಯ ಶುದ್ಧ ಕಾಯಕ ಮಾಡಿ ಬಂದ ಸಂಪತ್ತಿನಲ್ಲಿ ಧಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕೆಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು ಹೇಳಿದರು.

ತಾಲೂಕಿನ  ಶಿವಾಪೂರ ಗ್ರಾಮದ ಶುಕ್ರವಾರ ಅಂಬಲಿ ಒಡೆಯ ಶ್ರೀ ಅಡವಿಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿ ಬಸವ ಬುತ್ತಿ ಮಹಾ ಮಂಗಲ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಡವಿಸಿದ್ದೇಶ್ವರರು ಪವಾಡ ಪುರುಷರು ಅವರನ್ನು ಸದಾ ಸ್ಮರಿಸುತ್ತಾ ನಡೆದರೆ ಸಕಲ ಬೋಗ ಬಾಗ್ಯಗಳ ದೊರೆಯುತ್ತವೆ.ಆತ್ಮದ ಜೊತೆಗೆ ಲೋಕವನ್ನುದ್ದಾರ ಮಾಡುವ ಪೂಜ್ಯರಿರಬೇಕು ಆ ಕಾರ್ಯವನ್ನು ಅಡವಿಸಿದ್ದರಾಮ ಸ್ವಾಮಿಗಳು ಮಾಡುತ್ತಿದ್ದಾರೆ, ಗ್ರಾಮದ ತಾಯಂದಿರು ಭಕ್ತಿಯಿಂದ ಬುತ್ತಿ ಕಟ್ಟಿಕೊಂಡು ಅದನ್ನು ಸಹಸ್ರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಉಣಬಡಿಸಿದ್ದು ಸಂತೋಷದ ವಿಷಯ ಹಾಗೂ ನಿಜವಾದ ಹಳ್ಳಿಯ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

  ಬಿಡಿಸಿಸಿ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ ಜಾತ್ರೆಯಲ್ಲಿ ಭಾರತದ ಧಾರ್ಮಿಕ ಪರಂಪರೆಗೆ ಇರುವಂಥ ಇತಿಹಾಸ ಯಾವ ಜಗತ್ತಿಗೂ ಇಲ್ಲ ಸಾಧು ಸಂತರು ಬರೆದಿಟ್ಟಂಥ ಶಾಸ್ತ್ರವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಮಠ ಮಂದಿರಗಳೂ ಕೂಡ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿಗೂ ನಡೆದಿದೆಂದು ಹೇಳಿದರು. ಇಂಥ ಜಾತ್ರೆಗಳು ನಿರಂತರ ನಡೆಯಲಿ, ಗುರುವಿನ ಆಶೀರ್ವಾದ ಎಲ್ಲ ಭಕ್ತರ ಮೇಲೆ ಇರಲಿ. ಇಂಥ ಮಠಗಳಿಂದ ಪ್ರೇರಿತರಾಗಿ ನಾವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದು ಸಾಧ್ಯವಾಗುತ್ತದೆ. ಮನುಷ್ಯನಲ್ಲಿ ಸಾತ್ವಿಕ ಗುಣಗಳು ಬರಬೇಕಾದರೆ ಜಾತ್ರೆ ನಡೆಯಬೇಕು, ಎಂದರು.

  ಶಿವಾಪೂರ ಶ್ರೀ ಅಡವಿಸಿದ್ದೇಶ್ವರ ಮಠದ ಅಡವಿಸಿದ್ಧರಾಮ ಮಹಾಸ್ವಾಮಿಗಳುಮಾತನಾಡಿ ಎಲ್ಲರೂ ಒಂದಾಗಿ, ಒಗ್ಗಟಿನಿಂದ ಅಜ್ಜನ ಜಾತ್ರೆಯನ್ನು ಗ್ರಾಮಸ್ಥರು ಅತೀ ವಿಜ್ರಂಭನೆಯಿಂದ ಆಚರಿಸುತ್ತಿರುವುದು ಖುಷಿ ಸಂಗತಿ ಎಂದರು. ಈ ಸಂದರ್ಭದಲ್ಲಿ ಟ್ರಾಕ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸತ್ಕಾರ ಮಾಡಿ ಬಹುಮಾನ ನೀಡಲಾಯಿತು. ಜಾತ್ರೆಯಲ್ಲಿ ಪಂಚಾಕ್ಷರಿ ಶಾಸ್ತ್ರಿಗಳು ಪ್ರತಿದಿನ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯ ಮೇಲೆ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡಗುಂದಿ, ಶ್ರೀ ಚಂದ್ರಶೇಖರ ಸ್ವಾಮೀಜಿ . ಕಂಕಣವಾಡಿಯ ಮಾರುತಿ ಶರಣರು.ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ ಢವಳೇಶ್ವರ. ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಫಿರೋಜಿ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಮುಖರಾದ ತಾ.ಪಂ ಮಾಜಿ ಸದಸ್ಯ ಕೆಂಪಣ್ಣ ಮುಧೋಳ,ಬಸವರಾಜ ಸಾಯನ್ನವರ, ಸತೀಶ ಜುಂಜರವಾರ, ಶಿವಬಸು ಜುಂಜರವಾಡ, ಭೀಮಗೌಡ ಪಾಟೀಲ, ಮಹಾಂತೇಶ ಕುಡಚಿ, ಲಕ್ಕಪ್ಪ ಕಬ್ಬೂರ, ಬಸಪ್ಪ ಶೀಳನ್ನವರ. ಈರಯ್ಯ ಹೀರೆಮಠ. ಸೇರಿದಂತೆ ಅನೇಕ ಗ್ರಾಮದ ಹಿರಿಯರು, ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article