ನೇಸರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ ( ರಿ) ಬೆಳಗಾಂವ-1 ಜಿಲ್ಲೆ ಬೈಲಹೊಂಗಲ ತಾಲೂಕಿನ ಪರಮ ಪೂಜ್ಯ ಡಾ|| ಡಿ . ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ|| ಹೇಮಾವತಿ ವಿ.ಹೆಗ್ಗಡೆಯವರು ಮಾರ್ಗದರ್ಶನದೊಂದಿಗೆ ದೇಶನೂರು & ನೇಸರಗಿ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಸದಸ್ಯರು ಮಲ್ಲಿಕಾರ್ಜುನ ಮದನಬಾವಿ ಹಾಗೂ ತಾಲೂಕು ಯೋಜನಾಧಿಕಾರಿಗಳು ವಿಜಯಕುಮಾರ್ , ಜಿಲ್ಲಾ ವಿಮಾ ಸಮನ್ವಯ ಅಧಿಕಾರಿಗಳಾದ ಧನಂಜಯ , ನೇಸರಗಿ ದೇಶನೂರು ಒಕ್ಕೂಟದ ಅಧ್ಯಕ್ಷರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅವರು ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಜನೆ ಹಿನ್ನೆಲೆ ಕ್ಷೇತ್ರದ ಕಾರ್ಯಕ್ರಮಗಳ ಕುರಿತು ಯೋಜನಾಧಿಕಾರಿಗಳು ಮಾಹಿತಿ ನೀಡಿದರು.
ವಿಮಾ ಸಮನ್ವಯ ಅಧಿಕಾರಿಗಳಾದ ಧನಂಜಯ ಮಾತನಾಡಿ ಪ್ರಗತಿ ರಕ್ಷಾ ಕವಚ, ವಿಮಾ ಪಾಲಿಸಿಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು ಒಕ್ಕೂಟಗಳಲ್ಲಿ ಪದಾಧಿಕಾರಿಗಳ ನಾಯಕರ ಗುಣಲಕ್ಷಣಗಳು,ಮತ್ತು ಪದಾಧಿಕಾರಿಗಳ ಜವಾಬ್ದಾರಿ ಕುರಿತು ದೇಶನೂರು ವಲಯದ ಮೇಲ್ವಿಚಾರಕರಾದ ಫಕ್ಕೀರೇಶ ರವರು ಮಾಹಿತಿ ನೀಡಿದರು.
ಗ್ರಾಮ ಮಟ್ಟದಲ್ಲಿ ಗ್ರಾಮಗಳ ಅಭಿವೃದ್ಧಿ ಹಾಗೂ ಸದಸ್ಯರ ಕುಟುಂಬಗಳ ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ನೀಡುತ್ತಿರುವ ಅನುದಾನಗಳ ಕುರಿತು ನೇಸರಗಿ ವಲಯದ ಮೇಲ್ವಿಚಾರಕರಾದ ಪ್ರವೀಣ ದೊಡ್ಡಮನಿ ಮಾಹಿತಿ ನೀಡಿದರು. ದಾಖಲಾತಿ ನಿರ್ವಹಣೆ ಬಡ್ಡಿ ಲೆಕ್ಕಾಚಾರ ಪ್ರಗತಿನಿಧಿ ಸದ್ಬಳಕೆ ಕುರಿತು ಆಂತರಿಕ ಲೆಕ್ಕ ಪರಿಶೋಧಕರಾದ ಹನುಮಂತರವರು ಮಾಹಿತಿ ನೀಡಿದರು.
ಸಿ ಎಸ್ ಸಿ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ನೋಡಲ್ ಮೇಲ್ವಿಚಾರಕರಾದ ನಾಗರಾಜ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನೇಸರಗಿ ಹಾಗೂ ದೇಶನೂರು ವಲಯಗಳ ಒಕ್ಕೂಟ ಪದಾಧಿಕಾರಿಗಳು ಹಾಗೂ ಎಲ್ಲಾ ಸೇವಾ ಪ್ರತಿನಿಡಿಗಳು ಉಪಸ್ತಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸೇವಾ ಪ್ರತಿನಿಧಿ ನೀಲಮ್ಮ, ಕಾರ್ಯಕ್ರಮದ ಸ್ವಾಗತವನ್ನು ಸೇವಾ ಪ್ರತಿನಿದಿಯಾದ ನಿರ್ಮಲ ನೆಡೆಸಿಕೊಟ್ಟರು.