ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಸದಸ್ಯತ್ವ ಅಭಿಯಾನ 2024 ಕಾರ್ಯಕ್ರಮಕ್ಕೆ ಗುರುವಾರದಂದು ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯದಲ್ಲಿ ಚಾಲನೆ ನೀಡಲಾಯಿತು.
ಸದಸ್ಯತಾ ಅಭಿಯಾನದ ಚಾಲನೆ ನೀಡಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಮಾತನಾಡಿ ಭಾರತೀಯ ಜನತಾ ಪಾರ್ಟಿ ಒಂದು ಪಕ್ಷವಾಗಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ 6 ಲಕ್ಷದ ವರೆಗೆ ಸದಸ್ಯರನ್ನು ನೋಂದಣಿ ಮಾಡುವ ಮುಖಾಂತರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ತಮ್ಮ ತಮ್ಮ ಮಂಡಲಗಳಲ್ಲಿ ತಮ್ಮ ತಮ್ಮ ಬೂತ್ ಗಳಲ್ಲಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಈ ಸದಸ್ಯತಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ಭಾಗವಹಿಸಿದ್ದ ಆಟೋ ಚಾಲಕ ಹಾಗೂ ನಿವೃತ್ತ ಸೈನಿಕರ ಸದಸ್ಯತ್ವ ನೋಂದಣಿ ಮಾಡಿಸಿ ಆಟೋಗಳಿಗೆ ಅಭಿಯಾನದ ಸ್ಟಿಕ್ಕರ್ ಅಂಟಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬೆನಕೆ,ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ, ಮಹಾಂತೇಶ ದೊಡ್ಡಗೌಡರ, ಅರವಿಂದ್ ಪಾಟೀಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ. ಕೆ ವಿ ಪಾಟೀಲ್ . ಶ್ರೀಮತಿ ಧನಶ್ರೀ ದೇಸಾಯಿ.ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಮೋದ್ ಕೋಚೆರಿ, ಯುವರಾಜ್ ಜಾದವ, ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಕೋಳದೂರ, ಸದ್ಯಸತ್ವ ಅಭಿಯಾನ ಸಹ ಸಂಚಾಲಕ ಬಾಬಾಗೌಡ ಬೀರಾದರ, ಮಲ್ಲಿಕಾರ್ಜುನ ಮಾದನ್ನವರ,ಮಾದ್ಯಮ ಸಹ ಸಚಾಲಕ ಬಾಳೇಶ ಚವ್ವನ್ನವರ, ಮಹೇಶ ಮೋಹಿತೆ, ಸಂತೋಷ್ ದೇಶನೂರ, ವಿಠ್ಠಲ ಸಾಯನ್ನವರ ಮಂಡಲ ಅಧ್ಯಕ್ಷರುಗಳು ಹಾಗೂ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.