ಹುಕ್ಕೇರಿ.ಆರೋಗ್ಯಯುತ ಜೀವನ ನಡೆಸಲು ಮಕ್ಕಳಿಗೆ ಪೌಷ್ಟಿಕ ಆಹಾರ ಅಗತ್ಯವಾಗಿ ಲಭಿಸಬೇಕು ಎಂದು ಹುಕ್ಕೇರಿ ಸಿವ್ಹಿಲ್ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಹೇಳಿದರು.
ಅವರು ವಿಶ್ವ ಪೌಷ್ಟಿಕ ಆಹಾರ ದಿನ ಅಂಗವಾಗಿ ತಾಲೂಕಾ ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್ ಹೋಳೆಪ್ಪಾ ಪ್ರಾಸ್ತಾವೀಕವಾಗಿ ಮಾತಮಾಡಿ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆ ಬರದಂದೆ ಹಲವಾರು ಯೋಜನೆಗಳ ಮೂಲಕ ಅಂಗನವಾಡಿ ಮಕ್ಕಳಿಗೆ ಮತ್ತು ಬಾನಂತಿಯರಿಗೆ ನಮ್ಮ ಇಲಾಖೆ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ ಅದರಂತೆ ಎಲ್ಲರೂ ಪೌಷ್ಟಿಕ ಆಹಾರ ಕೊರತೆಯಾಗದಂತೆ ನೈಸರ್ಗಿಕವಾದ ಆಹಾರ ಸೇವನೆ ಮಾಡಬೇಕು ಎಂದರು.
ವೇದಿಕೆ ಮೇಲೆ ನ್ಯಾವಾದಿಗಳ ಸಂಘದ ಅದ್ಯಕ್ಷ ಅನೀಸ ವಂಟಮೂರಿ, ಪ್ರಶಾಂತ ಮುನ್ನೋಳ್ಳಿ, ಡಾ, ಉದಯ ಕುಡಚಿ, ಮಹಾದೇವಿ ಜಕಮತಿ, ಸಂಘದ ಉಪಾಧ್ಯಕ್ಷ ಬಿ ಎಮ್ ಜಿನರಾಳೆ, ಕಾರ್ಯದರ್ಶಿ ಎಸ್ ಜಿ ನದಾಫ್ ಉಪಸ್ಥಿತರಿದ್ದರು.
ನಂತರ ವಿವಿಧ ಬಗೆಯ ಪೌಷ್ಟಿಕ ಆಹಾರಗಳ ಪ್ರದರ್ಶನ ಮತ್ತು ಗರ್ಭಿಣ ಮಹಿಳೆಯರಿಗೆ ಶಿಮಂತ ಕಾರ್ಯಕ್ರಮ ಹಾಗೂ ಚಿಕ್ಕ ಮಕ್ಕಳಿಗೆ ಅನ್ನ ಪ್ರಾಸಾನ ಜರುಗಿತು.
ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧೀಕಾರಿ ಎನ್ ಎಸ್ ನಾಗಲೋಟಿ, ಪೋಲಿಸ್ ಅಧಿಕಾರಿ ಎ ಎಸ್ ಸನದಿ, ಎ ಎ ಬಾಗೆವಾಡಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.