ನೇಸರಗಿ: ಸಮೀಪದ ನಾಗನೂರ ಗ್ರಾಮದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಸಂಪಗಾಂವ ವಲಯ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನಾಗನೂರಿನ ಶ್ರೀ ಶಿವಬಸವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರ ಸುಂದರ ಕಲಗುಡಿ ಇತನು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಕುಮಾರಿ ನಂದಿನಿ ಮನೆನ್ನಿ 100 ಮೀಟರ್ ಓಟದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ,ಕುಮಾರಿ ಭಾನುಪ್ರೀಯ ಹಟ್ಟಿ ಇವಳು 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಹಾಗೂ ಶ್ರೀ ಶಿವಬಸವ ಪ್ರೌಢಶಾಲೆಯ ಕುಮಾರ ಶಿವಚೇತನ. ಮಡಿವಾಳರ ಇತನು 100 ಮೀಟರ್, 400 ಮೀಟರ್ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ಶಿವಕುಮಾರ ಅಲ್ಲಪ್ಪನವರ 800 ಮಿಟರ್ ಓಟದಲ್ಲಿ ಪ್ರಥಮ, ಕೀರ್ತಿಕುಮಾರ ಆಲದಮರದ 1500 ಮೀಟರ್ ಓಟದಲ್ಲಿ ಪ್ರಥಮ, ಬಸವೇಶ ಶಿವನಾಯ್ಕರ ಹ್ಯಾಮರ ಎಸೆತದಲ್ಲಿ ದ್ವಿತೀಯ, ರೀಲೆಯಲ್ಲಿ ಪ್ರಥಮ, ಅಂಜಲಿ ಕಸಲಾಪುರ ಚಕ್ರ ಎಸೆತದಲ್ಲಿ ಪ್ರಥಮ ಯಲ್ಲವ್ವ ಹುದ್ದಾರ 400 ಮೀಟರ್ ಓಟದಲ್ಲಿ ಪ್ರಥಮ ಶ್ರೇಯ ಬಾವಿಹಾಳ 400 ಮೀಟರ್ ಓಟದಲ್ಲಿ ಪ್ರಥಮ, ಅಮೂಲ್ಯ ಹಲಕ್ಕಿ ಅಡೆತಡೆ ಓಟದಲ್ಲಿ ದ್ವಿತೀಯ, ಸಪ್ನಾ ಕಂಡೊಜಿ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಗನೂರ ಬೆಳಗಾವಿ ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.