ಅತ್ಯಾಚಾರ ಪ್ರಕರಣಗಳ ತೀರ್ಪು ವಿಳಂಬ; ರಾಷ್ಟ್ರಪತಿ ಮುರ್ಮು ತೀವ್ರ ಕಳವಳ

Ravi Talawar
ಅತ್ಯಾಚಾರ ಪ್ರಕರಣಗಳ ತೀರ್ಪು ವಿಳಂಬ; ರಾಷ್ಟ್ರಪತಿ ಮುರ್ಮು ತೀವ್ರ ಕಳವಳ
WhatsApp Group Join Now
Telegram Group Join Now

ನವದೆಹಲಿ: ಹೇಯ ಅಪರಾಧ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳಲ್ಲಿ ವಿಳಂಬ ನಿರ್ಧಾರಗಳಿಂದಾಗಿ ನ್ಯಾಯಾಲಯಗಳು ಸಂವೇದನೆ ಕಳೆದುಕೊಂಡಿವೆ ಎಂದು ಜನಸಾಮಾನ್ಯರು ಯೋಚಿಸುವಂತಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ‘ಮುಂದೂಡಿಕೆ ಪ್ರವೃತ್ತಿ’ಯಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ಅವರು ಸಲಹೆ ನೀಡಿದ್ದಾರೆ. ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದು ಇದೇ ವೇಳೆ ಮುರ್ಮು ತಿಳಿಸಿದರು.

ಅತ್ಯಂತ ಅಮಾನುಷ ಕೃತ್ಯಗಳಾದ ಅತ್ಯಾಚಾರಗಳಂಥ ಪ್ರಕರಣಗಳ ತೀರ್ಮಾನಗಳು ಒಂದು ತಲೆಮಾರಿನ ನಂತರ ಕೋರ್ಟ್‌ಗಳಿಂದ ಹೊರಬರುತ್ತಿರುವುದರಿಂದ ನ್ಯಾಯಾಂಗ ವ್ಯವಸ್ಥೆ ಸಂವೇದನೆ ಕಳೆದುಕೊಂಡಿದೆ ಎಂಬುದು ಜನಸಾಮಾನ್ಯರ ಭಾವನೆ ಎಂದು ಮುರ್ಮು ಹೇಳಿದ್ದಾರೆ.

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಕುರಿತು ನವದೆಹಲಿಯ ಭಾರತ ಮಂಟಪಂನಲ್ಲಿ ಭಾನುವಾರ ನಡೆದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಬಾಕಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ಲೋಕ ಅದಾಲತ್ ಅನ್ನು ಹೆಚ್ಚೆಚ್ಚು ಆಯೋಜಿಸಬೇಕು. ಸಮಸ್ಯೆ ಬಗೆಹರಿಸಲು ಎಲ್ಲ ಪಾಲುದಾರರು ಭಾಗಿಯಾಗಿ ಆದ್ಯತೆಯಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮುರ್ಮು ಕಿವಿಮಾತು ಹೇಳಿದರು.

ಕೆಲವು ಪ್ರಕರಣಗಳಲ್ಲಿ, ಸಿರಿವಂತರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ನಂತರ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದರೆ ಅದೇ ಅಪರಾಧ ಕೃತ್ಯಗಳಿಂದ ತೊಂದರೆಗೀಡಾದ ಜನರು ತಾವೇ ಅಪರಾಧಗಳಲ್ಲಿ ಭಾಗಿಯಾದೆವೇನೋ ಎಂಬಂತೆ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು

WhatsApp Group Join Now
Telegram Group Join Now
Share This Article