ನೇಸರಗಿ: ಮನುಸ್ಯನ ನಂಬಿಕೆಯ ಪ್ರಾಣಿ ನಾಯಿ ಎಂಬ ಬಗ್ಗೆ ಎರಡು ಮಾತ್ತಿಲ್ಲ ಆದರೆ ಗ್ರಾಮದಲ್ಲಿ ಓಡಾಡಿ ಸಿಕ್ಕ ಸಿಕ್ಕಲಿ ತಿಂದು ಓಡಾಡುವ ಬೀದಿ ನಾಯಿಗಳು ಕೆಲವು ಸುರಕ್ಷಿತ, ಇನ್ನೂ ಕೆಲವು ರೋಗ ಹೊಂದಿರುವ ನಾಯಿಗಳಾಗಿವೆ.
ಕಳೆದ ಕೆಲವು ದಿನಗಳಲ್ಲಿ ಬೇರೆ ಬೇರೆ ಭಾಗಗಳಿಂದ ಬಂದು ವಲಸಿರುವ ಬೀದಿ ನಾಯಿಗಳು ಬಸ ನಿಲ್ದಾಣ ರಸ್ತೆ, ಎಪಿಎಂಸಿ, ಗ್ರಾಮದ ಎಲ್ಲ ಬಿದಿಗಳಲ್ಲಿ ಬೇಕಾ ಬಿಟ್ಟಿಯಾಗಿ ತಿರುಗುತ್ತಾ, ಅದರಲ್ಲಿ ಕೆಲವು ನಾಯಿಗಳಿಗೆ ಕುತ್ತಿಗೆ ಭಾಗದಲ್ಲಿ ಯಾರೋ ಚಾಕೊ ಹಾಕಿ ಗಾಯ ಮಾಡಿದ್ದು, ಹುಳ ಬಿದ್ದ ಪರಿಸ್ಥಿತಿಯಲ್ಲಿ ಬಾಗಿಲ ತಗೆದ ಮನೆಗಳಲ್ಲಿ ಪ್ರವೇಶ ಮಾಡಿ, ಮಲಗಿ, ತಿಂದು ಜನರಿಲ್ಲಿ ಭಯದ ವಾತಾವರಣ ಮೂಡಿದ್ದು, ಹೋದ ವರ್ಷ ಹುಚ್ಚು ನಾಯಿ ಕಡಿತಕ್ಕೆ ಅನೇಕ ಗ್ರಾಮಸ್ಥರು ಒಳಗಾಗಿ,ಬೆಳಗಾವಿ ಜಿಲ್ಲಾ ಚಿಕಿತ್ಸೆ ಪಡೆದು ಗುಣವಾಗಿದ್ದರು.
ಆದರೆ ಈಗ ಅದೇ ವಾತಾವರಣ ಮರಕಳಿಸುವ ವಾತಾವರಣ ನಿರ್ಮಾಣ ಅಗಿದ್ದು. ರಾತ್ರಿ 10,11,12 ಘಂಟೆಗೆ ಬೆಳಗಾವಿಗೆ ಕೆಲಸಕ್ಕೆ ಹೋಗಿ ಬರುತ್ತೆ ಜನರ ಪಾಡು ಅಷ್ಟಿಷ್ಟಲ್ಲ. ಅವರು ಜೀವ ಭಯದಲ್ಲಿ ಮನೆ ಮುಟ್ಟುವ ಪರಿಸ್ಥಿತಿ ಬಂದಿದೆ. ಈ ಅಂಜಿಕೆಯಿಂದ ಕೆಲವರು ರಾತ್ರಿ ಬರದೇ ಬೆಳಗಾವಿಯಲ್ಲೇ ಇದ್ದು ಬೆಳಿಗ್ಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ, ಎಷ್ಟೋ ಜನ ಓದಿ ಹೋಗಿ ನಾಯಿ ದಾಳಿಯಿಂದ ತಮ್ಮನ್ನು ರಕ್ಷಣೆ ಮಾಡಿಕೊಂಡಿದ್ದಾರೆ.
ರಾತ್ರಿ ಗ್ರಾಮಕ್ಕೆ ಕೆಲಸ ಮಾಡಿ ಮರಳುವ ಜನ, ಮನೆಗಳ ಒಳಗೆ ನುಗ್ಗಿ ಅಂತಕಕ್ಕೆ ಒಳಗಾಗಿರುವ ಜನರ ಮತ್ತು ಶಾಲಾ ಕಾಲೇಜು ಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ, ರಾತ್ರಿ ವೇಳೆ ಸರಿಯಾದ ವಿದ್ಯುತ್ ಸೇವೆ ಇಲ್ಲದ ಗಲ್ಲಿಗಳಲ್ಲಿ ತೊಂದರೆ ಆಗಿರುವ ಪರಿಸ್ಥಿತಿಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಶೀಘ್ರವಾಗಿ ಸಂಬಂದಿಸಿದ ಗ್ರಾಮ ಪಂಚಾಯತ ಪ್ರತಿನಿಧಿಗಳು, ಅಧಿಕಾರಿಗಳು, ತಾಲೂಕಾ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸುವ ಕೆಲಸ ಮಾಡಬೇಕೆಂದು ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಗ್ರಹಿಸಿದ್ದಾರೆ.


