ಒಣ ಕಸ, ಹಸಿ ಕಸ ವಿಂಗಡಣೆ ಸಮಾರೋಪ ಸಮಾರಂಭ

Ravi Talawar
ಒಣ ಕಸ, ಹಸಿ ಕಸ ವಿಂಗಡಣೆ ಸಮಾರೋಪ ಸಮಾರಂಭ
WhatsApp Group Join Now
Telegram Group Join Now
ನೇಸರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ ( ರಿ) ಬೆಳಗಾಂವ-1 ಇವರ ಸಂಯೋಜನೆಯಲ್ಲಿ  ಪೂಜ್ಯ ಡಾ|| ಡಿ . ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ||  ಹೇಮಾವತಿ ವಿ.ಹೆಗ್ಗಡೆಯವರು ಮಾರ್ಗದರ್ಶನದೊಂದಿಗೆ ನೇಸರಗಿ  ವಲಯದ ನೇಸರಗಿ ಬಿ ಕಾರ್ಯಕ್ಷೇತ್ರದಲ್ಲಿ ಶ್ರೀ ವೀರಭದ್ರೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ  ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಹಸಿ ಕಸ – ಒಣ ಕಸ ವಿಂಗಡಣೆ  ಕಾರ್ಯಕ್ರಮದ  ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮವನ್ನು  ಗ್ರಾಮ  ಪಂಚಾಯಿತಿ  ಉಪಾಧ್ಯಕ್ಷರಾದ  ಖಾಲಿದಬೇಗo, ಭಗವಾನ,   ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘದ ಬೆಳಗಾವ  ಜಿಲ್ಲಾ ನಿರ್ದೇಶಕರಾದ  ಸತೀಶ ನಾಯ್ಕ,  ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಸದಸ್ಯರಾದ ಮಲ್ಲಿಕಾರ್ಜುನ ಮದನಬಾವಿ ತಾಲೂಕಾ  ಯೋಜನಾಧಿಕಾರಿಗಳಾದ  ವಿಜಯಕುಮಾರ,  ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ  ಶೈಲಾ, ವಲಯದ ಮೇಲ್ವಿಚಾರಕರಾದ ಪ್ರವೀಣ ದೊಡ್ಡಮನಿ, ಕೃಷಿ ಅಧಿಕಾರಿ ರವಿ ಇವರ ಸಮ್ಮುಖದಲ್ಲಿ ದೀಪ  ಬೆಳಗಿಸುವುದರ ಮೂಲಕ   ಕಾರ್ಯಕ್ರಮಕ್ಕೆ ಬುಧವಾರದಂದು    ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಪ್ರಾಸ್ತಾವಿಕವಾಗಿ  ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ಮಾತನಾಡಿ   ಹಸಿ ಕಸ – ಒಣ ಕಸ  ವಿಂಗಡಣೆ ಆರೋಗ್ಯದ ಅರಿವು ಜ್ಞಾನವಿಕಾಸ ಕಾರ್ಯಕ್ರಮಗಳ ಅನುಷ್ಠಾನ ವಾತ್ಸಲ್ಯ ಕಾರ್ಯಕ್ರಮ ಗಿಡ ನಾಟಿ ಮಾಡುವ ಮೂಲಕ ಆರೋಗ್ಯಕ್ಕೆ ಹೆಚ್ಚು ಉಪಯೋಗ ಮಾಡುವ ಆಮ್ಲಜನಿಕ ಪಡೆದುಕೊಳ್ಳಲು  ಅನುಕೂಲವಾಗುತ್ತದೆ.  ಮನೆ ಸ್ವಚ್ಛತೆ  ಗಣ ತ್ಯಾಜ್ಯ ವಿಂಗಡನೆಯಿಂದ ಪರಿಸರ ಸಂರಕ್ಷಣೆ ಮಾಡಲು ಉಪಯೋಗವಾಗುತ್ತದೆ ಎಂದು ಮಾಹಿತಿ ಮಾರ್ಗದರ್ಶನ ನೀಡಿದರು  ಕಾರ್ಯಕ್ರಮದಲ್ಲಿ  ಕೇಂದ್ರದ ಸದಸ್ಯರಿಗೆ  ಹಸಿ ಕಸ  – ವಣ ಕಸ ವಿಂಗಡಣೆ ಮಾಡಲು ಎಲ್ಲರಿಗೂ ಕಸದ ಬುಟ್ಟಿಯನ್ನು ವಿತರಣೆ ಮಾಡಲಾಯಿತು.
 ಕಾರ್ಯಕ್ರಮದ ನಿರೂಪಣೆ  ವನಿತಾ,  ಸ್ವಾಗತ ದೀಪಾ  ಅಗಸಿಮನಿ ವಂದನಾರ್ಪಣೆ  ಸೇವಪ್ರತಿನಿಧಿ, ನಾಗವೇಣಿ ಬಡಿಗೇರ ನೆರವೇರಿಸಿದರು.  ಶಾಂತಾ, ಗೌರಿ   ಒಕ್ಕೂಟ ಅಧ್ಯಕ್ಷರು ಹಾಗೂ ಕೇಂದ್ರದ ಸದಸ್ಯರು  ಉಪಸ್ತಿತರಿದ್ದರು.
WhatsApp Group Join Now
Telegram Group Join Now
Share This Article