ಕ್ಯಾಲಿಫೋರ್ನಿಯಾ: ʻದೇವರ ಮೀನುʼ ಎಂದು ಕರೆಯಲ್ಪಡುವ ಈ ಮೀನು ಹೆಸರಿನಂತೆ ಆಕರದಲ್ಲಿಯೂ ವಿಚಿತ್ರವಾಗಿ ಕಾಣುತ್ತದೆ. ಈ ಮೀನು ಕಾಣಿಸಿಕೊಂಡರೆ ಸುನಾಮಿ, ಪ್ರಳಯದಂತಹ ಆಪತ್ತು ಎದುರಾಗುತ್ತದೆ ಎಂದು ನಂಬಲಾಗುತ್ತದೆ. ಇದೀಗ ಈ ಮೀನಿನ ಶವ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು, ಇದೇನೋ ದೊಡ್ಡ ಸಂಭವದ ಮುನ್ಸೂಚನೆ ಎಂದು ಜನರು ಬಯಪಡಲು ಆರಂಭಿಸಿದ್ದಾರೆ.
ಆಕಾರದಲ್ಲಿ ವಿಚಿತ್ರವಾಗಿರುವ ಈ ಮೀನು ಬೇರೆ ಮೀನುಗಳಿಗೆ ಹೋಲಿಸಿದರೆ ಅತ್ಯಂತ ವಿಭಿನ್ನವಾದ್ದು ಅಂತಲೇ ಹೇಳಬಹುದು. ಈ ಮೀನು ಸಾಮಾನ್ಯವಾಗಿ ದೊಡ್ಡ ಕಣ್ಣು ತಲೆ ಮೇಲೆ ಜುಟ್ಟನ್ನು ಹೊಂದಿದ್ದು. ಅತೀ ವಿರಾಳವಾದ ಮೀನಾಗಿದೆ.
ಸಾಮಾನ್ಯವಾಗಿ ಈ ಮೀನು ಸುನಾಮಿ ಹಾಗೂ ಪ್ರಳಯದಂತಹ ವಿಪತ್ತುಗಳೆದುರಾದಾಗ ಅದರ ಮುನ್ಸೂಚನೆ ನೀಡುತ್ತದೆ. ಈ ಮೀನು ಕಾಣಿಸಿಕೊಂಡರೆ ಇಂತಹದ್ದೊಂದು ಘಟನೆ ನಡೆಯುತ್ತದೆ ಎಂದು ಜನ ನಂಬುತ್ತಾರೆ. ಹೀಗಿರುವಾಗ, ಈ ಮೀನೊಂದು ಸಮುದ್ರದ ದಡದಲ್ಲಿ ಶವವಾಗಿ ಪತ್ತೆಯಾಗಿದೆ. ಇದೇ ಕಾರಣದಿಂದಾಗಿ ಜನರು ಇದೀಗ ಆತಂಕ ಪಡಲು ಶುರು ಮಾಡಿದ್ದಾರೆ.
ಈ ಮೀನಿನ ಹೆಸರು ಡೂಮ್ಸ್ಡೇ, ಜಗತ್ತನ ಅತೀ ವಿರಳವಾದ ಮೀನುಗಲಲ್ಲಿ ಒಂದಾಗಿರುವ ಈ ಮೀನನ್ನು ಜನ್ ʻದೇವರ ಮೀನುʼ ಎಂದು ಕರೆಯುತ್ತಾರೆ. ಸದ್ಯ ಈ ಮೀನು ಕ್ಯಾಲಿಫೋರ್ನಿಯಾದ ಸಮುದ್ರದ ದಡದಲ್ಲಿ ಶವವಾಗಿ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
30 ಅಡಿ ಬೆಳೆಯುವ 12 ಅಡಿ ಮೀನು ಇದಾಗಿದ್ದು, ದೊಡ್ಡ ಕಣ್ಣುಗಳು ಹಾಗೂ ತಲೆಯ ಮೇಲೆ ಕೆಂಪು ಜುಟ್ಟು ಹೊಂದಿರುತ್ತದೆ. ಜಪಾನ್ನಲ್ಲಿ 2011ರ ಭೂಕಂಪಕ್ಕೂ ಮೊದಲು 20 ಓರ್ಫಿಶ್ಗಳು ಸಮುದ್ರ ತೀರಕ್ಕೆ ತೇಲಿ ಬರುವ ಮೂಲಕ ಭೂಕಂಪದ ಮುನ್ಸೂಚನೆ ನೀಡಿತ್ತು.