ಮುಡಾ ಹಗರಣ ಕುರಿತು ಸಿಎಂ ವಿರುದ್ಧ ನಾಳೆ ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್; ಖಾಸಗಿ ದೂರುಗಳ ವಿಚಾರಣೆ

Ravi Talawar
ಮುಡಾ ಹಗರಣ ಕುರಿತು ಸಿಎಂ ವಿರುದ್ಧ ನಾಳೆ ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್; ಖಾಸಗಿ ದೂರುಗಳ ವಿಚಾರಣೆ
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್ 28: ಮುಡಾ ಸೈಟ್ ಹಂಚಿಕೆ ಹಗರಣ ಸಿಎಂ ಸಿದ್ದರಾಮಯ್ಯಗೆ ಆತಂಕ ತಂದೊಡ್ಡಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್​​ಗೆ ಅನುಮತಿಯನ್ನೂ ಕೊಟ್ಟಿದ್ದಾರೆ. ಇದರ ಮಧ್ಯೆ ಹೈಕೋರ್ಟ್ 10ದಿನಗಳ ಕಾಲ ಮಧ್ಯಂತರ ತಡೆ ನೀಡಿತ್ತು. ತಾತ್ಕಾಲಿಕ ರಿಲೀಫ್​ಗೆ ಇವತ್ತೊಂದೇ ದಿನ ಬಾಕಿಯಿದೆ. ಗುರುವಾರ ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಪ್ರಾಸಿಕ್ಯೂಷನ್‌, ಖಾಸಗಿ ದೂರುಗಳಿಗೆ ಮಧ್ಯಂತರ ತಡೆ ನೀಡಿ ಆದೇಶಿಸಿದ್ದ ಕೋರ್ಟ್‌ ವಿಚಾರಣೆ ನಡೆಸಲಿದೆ. ಏನಾಗಲಿದೆ ಎಂಬುದರ ಬಗ್ಗೆಯೇ ಎಲ್ಲರ ಚಿತ್ತ ನೆಟ್ಟಿದೆ.

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರವನ್ನು ಪ್ರಸ್ತಾಸಿರುವ ಡಿಸಿಎಂ ಡಿಕೆ ಶಿವಕುಮಾರ್, ಹೆಚ್​ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಬಹಳ ಪ್ರಾಮಾಣಿಕರು. ಅವರು ಮಾಡುವುದೆಲ್ಲ ಸಾಚಾ ಕೆಲಸ ಎಂದು ತಿವಿದಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹಿ ಫೋರ್ಜರಿ ಆಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅದಕ್ಕೂ ಡಿಸಿಎಂ ತಿರುಗೇಟು ನೀಡಿದ್ದಾರೆ.

WhatsApp Group Join Now
Telegram Group Join Now
Share This Article