ಶಾಸಕ ಅಭಯ ಪಾಟೀಲ ವಿರುದ್ಧ ಸಿಡಿದೆದ್ದ ಖಾದರವಾಡಿ ರೈತರು

Ravi Talawar
ಶಾಸಕ ಅಭಯ ಪಾಟೀಲ ವಿರುದ್ಧ ಸಿಡಿದೆದ್ದ ಖಾದರವಾಡಿ ರೈತರು
WhatsApp Group Join Now
Telegram Group Join Now
ಬೆಳಗಾವಿ:   ಜೀವನೋಪಾಯಕ್ಕೆ ಆಧಾರವಾದ  ರೈತರ 360 ಪೈಕಿ 155  ಎಕರೇ ಜಮೀನನ್ನು  ಶಾಸಕ ಅಭಯ ಪಾಟೀಲ ಹಾಗೂ ಸಹೋದರರು ಕಬಳಿಸಿ ಅನ್ನದಾತರಿಗೆ ವಂಚಿಸಿದ್ದಾರೆ. ಜಮೀನನ್ನು ಕೇಳಲು ಹೋದ ರೈತರಿಗೆ ಜೀವ ಬೆದರಿಕೆ ಹಾಕಿದ್ದಾರೆ. ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಖಾದರವಾಡಿ ಗ್ರಾಮದ ರೈತರು ಬೆಳಗಾವಿ ಪೊಲೀಸ್‌ ಆಯುಕ್ತರಾದ ಯಡಾ ಮಾರ್ಟಿನ್‌  ಮಾರ್ಬನ್ಯಾಂಗ್ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು  ಆಗಮಿಸಿದ ನೂರಾರು ರೈತರು ಶ್ರೀರಾಮ ಸೇನೆ ಹಿಂದೂಸ್ತಾನದ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಪೊಲೀಸ್‌ ಆಯುಕ್ತರ ಕಚೇರಿಗೆ ಆಗಮಿಸಿದ  ಖಾದರವಾಡಿ ಗ್ರಾಮದ ರೈತರು ಅಭಯ ಪಾಟೀಲ ವಿರುದ್ಧ ” ಅಭಯ ಚೋರ್  ಹೈ” ಎಂದು ಘೋಷಣೆ ಕೂಗುವ ಮೂಲಕ, ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ಖಾದರವಾಡಿ ಗ್ರಾಮಸ್ಥರು ಮಾತನಾಡಿ, ಜಮೀನು ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿವರೆಗೂ ಈ ಜಮೀನು ರೈತರ ವಹಿವಾಟಿಯಲ್ಲಿದೆ. ಆದರೆ, ಜಮೀನವನ್ನು ಗ್ರಾಮದ ಕೆಲವು ಭೂಮಾಪಿಯಾ ದಲ್ಲಾಳಿಗಳು ಕೆಲವು ಜನಪ್ರತಿನಿಧಿಗಳ ಜೊತೆಗೆ ಕೂಡಿಕೊಂಡು ಮತ್ತು ಅವರ ಸಹಾಯದಿಂದ ಈ ಜಮೀನಿನ ಕಂದಾಯ ದಾಖಲೆಗಳಲ್ಲಿ ದಾಖಲಿರುವ ರೈತರ ವಾರಸುದಾರರಿಗೆ ಬುಡಾದಿಂದ ನೋಟಿಸ ಕಳಿಸಿಕೊಟ್ಟು ಕೆಲವು ಭೂಮಾಪಿಯಾದರರು ರೈತರ ಪ್ರತಿ ಎಕರೆಗೆ ಜಮೀನವನ್ನು 13 ಲಕ್ಷ ರೂ. ಖರೀದಿ ಮಾಡಿ, ಮರಳಿ ಜಮೀನನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ಎಕರೆಗೆ ರೂ. 1, 8 ಕೋಟಿ ರೂ.  ಮಾರಾಟ ಮಾಡಿರುತ್ತಾರೆ.  ಉಳುವ ಭೂಮಿಯನ್ನು ಪಡೆದು ರೈತರಿಗೆ ಮೋಸ ಮಾಡಿದ್ದಾರೆ.  ಮಾರಾಟ ಮಾಡಿದ ಹಣವನ್ನು ನೀಡದೆ ವಂಚಿಸಿದ್ದಾರೆ.  ಜಮೀನನ್ನು ಕಳೆದುಕೊಂಡು ರೈತರು ಬೀದಿಗೆ ಬಂದಿದ್ದಾರೆ. ರೈತರಿಗೆ ಮೋಸ ಮಾಡಿದ ಭೂ ಮಾಪಿಯಾದಾರರಿಗೆ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದರು.
ಶ್ರೀರಾಮ ಸೇನೆ ಹಿಂದೂಸ್ತಾನದ ಅಧ್ಯಕ್ಷರಾದ ರಮಾಕಾಂತ್‌  ಕೊಂಡುಸ್ಕರ್‌ ಮಾತನಾಡಿ, ಖಾದರವಾಡಿ ಗ್ರಾಮದ 1200 ಕುಟುಂಬದವರು ಜಮೀನನ ಮೇಲೆ ಅವಲಂಭಿತರಾಗಿದ್ದಾರೆ.  ಈ ಜಮೀನನ್ನು ಬುಡಾ ಸ್ವಾಧೀನ ಪಡಿಸಿಕೊಳ್ಳಲಿದೆ ಎಂದು ಶಾಸಕರ ಬೆಂಬಲಿಗರು ಫೇಕ್ ನೋಟಿಸ್ ರವಾನೆ ಮಾಡಿದ್ದಾರೆ  ಎಂದು ಆರೋಪಿಸಿದರು.  ಶಾಸಕ ಅಭಯ್ ಪಾಟೀಲ್ ಹಾಗೂ ಬೆಂಬಲಿಗರು ಧಮ್ಕಿ ಹಾಕಿ 155 ಎಕರೆ ಜಮೀನನ್ನು ಕಬಲಿಸಿದ್ದಾರೆ ಎಂದು ಎಂಇಎಸ್ ಮುಖಂಡ ರಮಾಕಾಂತ್ ಕೊಂಡೂಸ್ಕರ್ ಆರೋಪಿಸಿದ್ದಾರೆ.  ಶಾಸಕ ಅಭಯ್ ಪಾಟೀಲ್ ಹಾಗೂ ಈ ಹಿಂದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಪ್ರೀತಂ ನಸಲಾಪುರೆ, ಶೀತಲ್ ಪಾಟೀಲ್ ಹಾಗೂ ಸಂತೋಷ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್‌ರವರಿಗೆ ಮನವಿ ಮಾಡಿದ್ದಾರೆ.
ನೂರಾರು ಎಕರೇ ಜಾಗವನ್ನು ಕಳೆದುಕೊಂಡು ರೈತರು ಇಂದು ಬೀದಿಗೆ ಬಂದಿದ್ದಾರೆ. ಈಗಿರುವ ಭೂಮಿ ಇನ್ನಷ್ಟು ಫಲವತ್ತತೆ ಮಾಡಿಕೊಡುವುದಾಗಿ ರೈತರ ಸಹಿ ಮಾಡಿಸಿಕೊಂಡು  ದ್ರೋಹ ಮಾಡಿದ್ದಾರೆ. ರೈತರ ಮೇಲಿನ ದೌರ್ಜನ್ಯ ಅಕ್ಷಮ್ಯ ಎಂದು  ಅಸಮಾದಾನ ಹೊರಹಾಕಿದರು.
ಸ್ವಂತದ ಲಾಭಕ್ಕಾಗಿ ಬಡಾವಣೆಗೆ ಪ್ರಧಾನಿ ಮೋದಿಜಿಯವರ ಹೆಸರನ್ನು ಇಡಲಾಗಿದೆ. ಇದರಿಂದ ರೈತ ವರ್ಗದವರಿಗೆ ಮೋಸ ಮಾಡಿರುವ ಮೇಲೆ ಸೂಕ್ತ ತನಿಖೆಯನ್ನು ಮಾಡಿ, ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.  ಖಾದರವಾಡಿ ಗ್ರಾಮದ ಗುಡ್ಡದ ಜಮೀನು (ಬಕ್ಕಪ್ಪಾ ವಾರಿ) ಸರ್ವೆ ನಂಬರ 407, 408/2, 409, 410,411, 413, 414,415, 416,417,448/2,448/7,448/3, 449/2, 450/3, 450/6, ಈ ಜಮೀನುಗಳ ಉಳಿಸಲು ಹೋರಾಟ ಮಾಡುತ್ತೀರುವ ರೈತರಿಗೆ ಜೀವ ಬೇದರಿಕೆಯನ್ನು ನೀಡಲಾಗುತ್ತಿದೆ ಅವರಿಗೆ ಪೊಲೀಸ್‌ ರಿಂದ ರಕ್ಷಣೆ ನೀಡಬೇಕು. ಈ ಜಾಗದಲ್ಲಿ ನೂರಾರು ಕುಟುಂಬಗಳನ್ನು ಜೀವನ ಸಾಗಿಸುತ್ತಿದ್ದಾರೆ.  ಮಾನವೀಯತೆ ಇಲ್ಲದ ಶಾಸಕ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಕಂಡಲೆಲ್ಲ ಜಮೀನನ್ನು ಕಬಳಿಸಿ, ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿರುವ ಕಾಗದ ಪತ್ರದಲ್ಲಿ ಯಾವ ರೈತರು ಇದ್ದಾರೆ ತಿಳಿಸಲಿ, ಖೋಟಿ ದಾಖಲಾತಿ ಸೃಷ್ಟಿ  ರೈತರ ಕಣ್ಣಿಗೆ ಮಣ್ಣು ಎಸಗಿದ ಶಾಸಕರ ವಿರುದ್ಧ ಕ್ರಮವಾಗಲಿ. ಆಗಿನ  ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿದ್ದ ಪ್ರೀತಂ ನಸಲಾಪುರೆ ಅವರು  ಆಡಳಿತ ಅವಧಿಯಲ್ಲಿ ಈ ಭ್ರಷ್ಟಚಾರ ನಡೆದಿದೆ. ಅಧಿಕಾರಿಗಳು ಇದಕ್ಕೆ ಉತ್ತರ ನೀಡಬೇಕು, ಶಾಸಕರ ತಾಳಕ್ಕೆ ಅಧಿಕಾರಿಗಳು ಕುಣಿದಿದ್ದಾರೆ.  ಇದರ ಹಿಂದೆ ಕಾಣದ ಕೈ ಗಳು ಅಡಗಿವೆ, ಪೊಲೀಸ್‌ರು ಆಯುಕ್ತ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ರೈತರಿಗೆ ನ್ಯಾಯ ಕೊಡಸಿಬೇಕು ಎಂದು ಮನವಿ ಮಾಡಿಕೊಂಡರು.
ಕಳೆದ 100 ವರ್ಷಗಳಿಂದ ಯಾವುದೇ ಮೋಟರ ಪಂಪಸೇಟ್ ಇಲ್ಲದೆ ಇಲ್ಲಿಂದ ಜನರಿಗೆ ನೀರು ಪೂರೈಕೆಯಾಗುತ್ತಿದೆ. ಮತ್ತು ಸದರಿ ಜಮೀನಿನಲ್ಲಿ ಒಂದು ಕೆರೆಯು ಸಹ ಇರುತ್ತದೆ. ಈ ಕೆರೆಯ ನೀರನ್ನು ಬಳಕೆಗಾಗಿ ಮತ್ತು ಜಾನಾವಾರುಗಳಿಗೆ ಸದರಿ ಕೆರೆಯ ನೀರನ್ನು ಅವಲಂಬಿತವಾಗಿವೆ. ಈ ಜಮೀನು ವಶಪಡೆದುಕೊಂಡರೆ ಖಾದರವಾಡಿ ಗ್ರಾಮದ ರೈತರು ಜೀವನ ನಡೆಸುವುದು ಅತ್ಯಂತ ಕಠಿವಾಗಿದೆ ಮತ್ತು ಸದರಿ ಗ್ರಾಮವನ್ನು ಬಿಟ್ಟು ಬೇರೆ ಕಡೆ ಗೂಳೆ ಹೋಗಬೇಕಾಗುತ್ತದೆ. ಇದ್ಯಾವುದನ್ನು ಅರಿಯದ ಶಾಸಕರ ಅನ್ನದಾತರಿಗೆ ಅನ್ಯಾಯ ಎಸಗಿದ್ದಾರೆ  ಎಂದು ಹೇಳಿದರು.
 ಈ ಸಂದರ್ಭದಲ್ಲಿ ಬಾಲಕೃಷ್ಣ ಕಡ್ಲಿಕರ್, ವಿಶಾಲ್ ಧಮ್ನೇಕರ್ ,  ರೋಹಿದಾಸ್ ಪಾಟೀಲ್, ಅಪ್ಪಾಜಿ ಗೋರಲ್ , ಮಹಾದೇವ ಶಿವಂಗೇಕರ್ , ಬಲರಾಮ್ ಮಹಾದೇವ ಪಿಂಗಟ್ ,  ಅನಿಲ್ ಮಾಳವಿ,  ಶಂಕರ್ ಶಿವಂಗೇಕರ್ ,  ನಾರಾಯಣ ಬಿ ಪಾಟೀಲ್,  ಪರಶ್ರಾಮ ಎಂ ಪಾಟೀಲ್,  ಕಲ್ಲಪ್ಪ ವೈ. ಪಾಟೀಲ್ ,  ನಿಂಗಪ್ಪ ಮಾಳವಿ, ಪಿರಾಜಿ ಡೋಲೇಕರ್ , ಬಾಲು ಬಸ್ತವಾಡಕರ್ , ಮಾರುತಿ ಬಸ್ತವಾಡಕರ್,  ಮನೋಹರ್ ಕಡ್ಲಿಕರ್ ಹಾಗೂ ಇತರರು ಇದ್ದರು.
WhatsApp Group Join Now
Telegram Group Join Now
Share This Article