ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಒಂದು ದಿನದ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಎವಂ ಉತ್ಥಾನ್ ಮಹಾಭಿಯಾನ (ಪಿಎಮ್ ಕುಸುಮ) ಯೋಜನೆಯ ಒಂದು ದಿನದ ಜಾಗೃತಿ ಮೂಡಿಸುವ ಪ್ರಾಯೋಗಿಕ ಕಾರ್ಯಾಗಾರವನ್ನು ದಿನಾಂಕ ೨೦-೦೮-೨೦೨೪ ರಂದು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಅಂಗಡಿಯವರು ವಹಿಸಿದ್ದರು.
ನಂತರ ಮಾಡತನಾಡಿದ ಅವರು ಕೃಷಿಯಲ್ಲಿ ಸೋಲಾರ್ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ, ಈ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆಯಲು ಕರೆ ನೀಡಿದರು. ಕಾರ್ಯಕ್ರಮದ ಮುಖ್ಯ ತರಬೇತುದಾರರಾದ ಶ್ರೀ ಜಿ. ಟಿ. ವೀರಭದ್ರರೆಡ್ಡಿ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಹಾಗೂ ತರಬೇತುದಾರ ಪಿಎಮ್ ಕುಸುಮ ಇವರು ಕುಸುಮ್ ಕಾಂಪೋನೆಂಟ್-ಎ
ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು. ರೈತರೊಂದಿಗೆ ಸಂವಾದ ನಡೆಸಿ ರೈತರ ಅನಿಸಿಕೆಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸುಮಾರು ೪೦ ಜನ ರೈತರು ಮತ್ತು ರೈತ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕೊನೆಯಲ್ಲಿ ಡಾ. ಎಸ್. ಎಸ್. ಹಿರೇಮಠ ವಂದಿಸಿದರು ಹಾಗೂ ವಿಜ್ಞಾನಿ ಶ್ರೀ ಎಸ್. ಎಮ್. ವಾರದ ಕಾರ್ಯಕ್ರಮ ನಡೆಸಿಕೊಟ್ಟರು.