ಕರ್ನಾಟಕದಾದ್ಯಂತ ಆಗಸ್ಟ್ 27ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸೇಡಬಾಳ, ಸಿಂಧನೂರು, ತಾಳಿಕೋಟೆ, ಸಿದ್ದಾಪುರ, ಕಲಬುರಗಿ, ಹಳಿಯಾಳ, ಮುದ್ದೇಬಿಹಾಳ, ಖಜೂರಿ, ಕಮಲಾಪುರ, ಮುನಿರಾಬಾದ್, ಕಕ್ಕೇರಿ, ಹಿರಿಯೂರು, ಕಮಲಾಪುರ, ಪರಶುರಾಂಪುರ, ಕುಷ್ಟಗಿ, ಮುದಗಲ್, ಬೆಳ್ತಂಗಡಿ, ಕುಷ್ಟಗಿ, ಇಂಡಿ, ದೇವರಹಿಪ್ಪರಗಿ, ಸೈದಾಪುರ, ಲಿಂಗಸುಗೂರು, ಹುಂಚದಕಟ್ಟೆ, ತರೀಕೆರೆ, ತಿಪಟೂರು, ಮಿಡಿಗೇಶಿ, ಆನವಟ್ಟಿ, ಹೊಸಕೋಟೆ, ಚನ್ನರಾಯಪಟ್ಟಣ, ಕೊಪ್ಪ, ಕೂಡ್ಲಿಗಿ, ಹೊಸಕೋಟೆ, ನಂಜನಗೂಡಿನಲ್ಲಿ ಮಳೆಯಾಗಿದೆ.