ಗದಗ, ಆಗಸ್ಟ್.21: ಗದಗ-ಬೆಟಗೇರಿ ನಗರಸಭೆ ಆಸ್ತಿ ಲೀಜ್ ಪ್ರಕರಣ ಅವಳಿ ನಗರದಲ್ಲಿ ಭಾರಿ ಸದ್ದು ಮಾಡಿದೆ. ಸದ್ದಿಲ್ಲದೆ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡುವ ಮೂಲಕ ಸರ್ಕಾರಿ ಆಸ್ತಿ ನುಂಗುವ ಪ್ಲಾನ್ ಅಂತ ಗದಗ-ಬೆಟಗೇರಿ ಅವಳಿ ನಗರದ ಜನರು ಮಾತಾಡ್ತಾಯಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲೇ ಅವಳಿ ನಗರದ ಜನ್ರು ಬಿಜೆಪಿಗೆ ಛೀ.., ಥೂ ಅಂತಿದ್ದಾರೆ. ಬಿಜೆಪಿ (BJP) ನಗರಸಭೆ ಆಡಳಿತದ ಅಂದಿನ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮೂಷಿಗೇರಿ ಅಂಡ್ ಗ್ಯಾಂಗ್ ನಗರಸಭೆ ಅಧಿಕೃತ ಠಾರಾವು ಬುಕ್ ನಲ್ಲಿ ಇಲ್ಲದಿದ್ರೂ ನಕಲಿ ಠರಾವು ಮಾಡಿ ಸಿಕ್ಕಾಕಿಕೊಂಡಿದ್ದಾರೆ.
ನಕಲಿ ಠರಾವು, ಪೌರಾಯುಕ್ತರ ಫೋರ್ಜರಿ ಸಹಿ ಮಾಡಿ ಬಿಜೆಪಿ ಆಡಳಿತ ನೂರಾರು ಕೋಟಿ ಆಸ್ತಿ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡಿ ಕೋಟ್ಯಾಂತರ ಲೂಟಿ ಮಾಡಿದೆ. ಈ ವಿಷಯ ಗೊತ್ತಾದ ಬಳಿಕ ಅಂದಿನ ಪ್ರಭಾರ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಹಾಗೂ ವಿಜಯಲಕ್ಷ್ಮೀ ಶಿಗ್ಲಿಮಠ ಹಾಗೂ ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ ಓನರ್ಸ್, ಅಸೋಸಿಯೇಷನ್ ಗದಗ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಈ ವಿಷಯ ಅವಳಿ ನಗರದಲ್ಲಿ ಭಾರಿ ಸಂಚಲನ ಮೂಡಿಸಿದೆ.