ಘಟಪ್ರಭಾ:ಮೈಸೂರ-ಅಜ್ಮೀರ ಎಕ್ಸ್ ಪ್ರೆಸ್ ರೈಲು ಹಾಗೂ ಗರೀಬನವಾಜ್ ಎಕ್ಸ್ ಪ್ರೆಸ್ ಈ ಎರಡು ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಆಗ್ರಹಿಸಿ ಗೋಕಾಕ ತಾಲೂಕಾ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದರು ಈ ಮನವಿಯನ್ನು ಪರಿಶೀಲಿಸಿ ನಿಮ್ಮ ಬೇಡಿಕೆಯನ್ನು ಆದಷ್ಟು ಬೇಗ ಪೂರೈಸುವದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ,ಕರವೇ ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ, ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ,ಕರವೇ ತಾಲೂಕಾಧ್ಯಕ್ಷ ಶೆಟ್ಟೆಪ್ಪಾ ಗಾಡಿ ವಡ್ಡರ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ರಾಜು ದೊಡಮನಿ,ರೆಹಮಾನ್ ಮೊಕಾಶಿ,ರವಿ ನಾವಿ,ಈರಯ್ಯ ಪೂಜೇರಿ,ಮಂಜುನಾಥ ಜಲ್ಲಿ,ಮಾರುತಿ ಚೌಕಶಿ,ಶಶಿ ಚೌಕಶಿ,ಯಲ್ಲಪ್ಪ ಹಂಚಿನಾಳ,ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.