ಗದಗ 19: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ದಿನಾಂಕ: ೧೯-೦೮-೨೦೨೪ ರಂದು ಬೆಳಿಗ್ಗೆ ೫-೩೦ ರಿಂದ ೬-೩೦ ರವರೆಗೆ ಯೋಗ ಅಭ್ಯಾಸವನ್ನು ಮಾಡಿಸಲಾಯಿತು.
ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಗಿರಿಯಪ್ಪ ಮಡಿವಾಳರ ಇವರು ರಕ್ಷಾ ಬಂಧನ ಹಬ್ಬದ ಬಗ್ಗೆ ತಿಳಿಸಿದರು. ಶ್ರಾವಣ ಮಾಸದ ನೂಲು ಹುಣ್ಣಿಮೆಯ ದಿನ ಆಚರಿಸುವ ಹಬ್ಬವೇ ರಕ್ಷಾ
ಬಂಧನ ಹಬ್ಬ. ಸಹೋದರಿಯರು, ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ. ನಿಮಗೆ ಏನೇ ಕಷ್ಟ ಬಂದರೂ ರಕ್ಷಣೆಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಖಜಾಂಚಿಯಾದ ಶ್ರೀ ಕೆ.ಎಸ್. ಗುಗ್ಗರಿಯವರು ಸಹ ಅಣ್ಣ- ತಂಗಿಯರ ಬಾಂಧವೈದ ಬಗ್ಗೆ ತಿಳಿಸಿದರು. ಶ್ರೀ ಎಸ್.ಎನ್. ಬಳ್ಳಾರಿಯವರು ಸಹ ರಕ್ಷಾ ಬಂಧನದ ಬಗ್ಗೆ ಸವಿಸ್ತಾರವಾಗಿ
ತಿಳಿಸಿದರು. ಶ್ರೀ ಸದಾನಂದ ಕಾಮತ ಇವರು ಸಹ ರಕ್ಷಾ ಬಂಧನದ ಬಗ್ಗೆ ಮಾತನಾಡಿದರು. ಮಹಿಳಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶೋಭಾ
ಗುಗ್ಗರಿಯವರು ರಕ್ಷಾ ಬಂಧನ ಹಬ್ಬದ ಅಣ್ಣ-ತಂಗಿಯರ ಬಾಂಧವೈದ ಬಗ್ಗೆ ತಿಳಿಸಿದರು.
ಎಲ್ಲ ಸಹೋದರಿಯರು ಸಹೋದರರಿಗೆ ರಾಖಿಯನ್ನು ಕಟ್ಟಿದರು. ರಕ್ಷಾ ಬಂಧನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಇವತ್ತಿನ ಕಾರ್ಯಕ್ರಮದಲ್ಲಿ ಬಸವರಾಜ ಹಿರೇಮಠ, ಅಪ್ಪಣ್ಣ ಮಠದ, ರವಿ ಬೆಂಗಳೂರು, ವೆಂಕಣ್ಣ ಮೆರೋಡಿ, ಶಂಕರ ಕೆಟಗೇರಿ, ಲದ್ವಾ, ಲಕ್ಷ್ಮಣ ಹಾಗೂ ಲಕ್ಷ್ಮೀ ಗುರಿಕಾರ, ಲತಾ ಮಾನೆ, ಶಶಿಕಾಲ ಹಡಗಲಿಮಠ, ಶೋಭಾ ಬೆಂಗಳೂರು, ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರು, ಯೋಗ ಸಾಧಕರು, ಅಣ್ಣ-ತಂಗಿಯರು,ಮುಂತಾದವರು ಉಪಸ್ಥಿತರಿದ್ದರು.