ಇಂಡಿ : ಕೋಲ್ಕೊತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಖಂಡಿಸಿ ಭಾರತೀಯ ವೈದ್ಯರ ಸಂಘ ಇಂಡಿ ಘಟಕ ,ಆಯುರ್ವೇದ ಫೇಡೆರೆಷನ್ ಅಸೋಶಿಯೇಷನ್, ಭಾರತೀಯ ದಂತ ವೈದ್ಯರ ಅಶೋಶಿಯೇಷನ್ ಇಂಡಿ ಘಟಕದ ವತಿಯಿಂದ ಶನಿವಾರ ಮಿನಿ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಡಾ|| ಭಾರತಿ ಗಜಾಕೋಶ ಆಸ್ಪತ್ರೆಯಿಂದ ಬಸವೇಶ್ವರ ವೃತ್ತದ ಮೂಲಕ ಮಿನಿ ವಿಧಾನಸೌಧದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಭಾರತೀಯ ವೈಧ್ಯರ ಸಂಘದ ಇಂಡಿ ಘಟಕದ ಅಧ್ಯಕ್ಷ ಡಾ|| ಅನೀಲ ವಾಲಿ ಮಾತನಾಡಿ ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯನ್ನು ಕಿಡಿಗೇಡಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವದು ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ. ಘಟನೆಯಿಂದ ರಾತ್ರಿ ಮತ್ತು ತುರ್ತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರ ಸುರಕ್ಷತೆ ಯ ಬಗ್ಗೆ ಆತಂಕ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಫಂದನಾ ಆಸ್ಪತ್ರೆ ಮ್ಯಾನೆಜಿಂಗೆ ಡೈರೆಕ್ಟರ್ ಡಾ|| ಲಕ್ಷೀಕಾಂತ ಮೇತ್ರಿ ಮಾತನಾಡಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಲ್ಲಿ ಪ್ರತಿಭಟನೆ ನಡೆಸುವವರಿಗೆ ರಕ್ಷಣೆ ಇಲ್ಲದಂತಾಗಿದೆ. ಸಿ.ಬಿ.ಐ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು. ವೈದ್ಯರ ನ್ಯಾಯ ಸಿಗುವ ವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಡಾ|| ರಮೇಶ ರಾಠೋಡ ಮಾತನಾಡಿ ಶನಿವಾರ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಗ್ಗೆ ೬ ರಿಂದ ರವಿವಾರ ಬೆಳಗ್ಗೆ ೬ ರ ವರೆಗೆ ಹೊರರೋಗಿಗಳ ಸೇವೆ ಇಲ್ಲ. ಯಾವುದೋ ಪ್ರಕರಣಗಳಲ್ಲಿ ಜನ ಉದ್ವೇಗ ಗೊಳ್ಳುತ್ತಾರೆ. ಅಂತಹ ಪ್ರಸಂಗಗಳಲ್ಲಿ ಅವಘಡಗಳು ಸಂಭವಿಸುತ್ತವೆ. ಅದಕ್ಕೆ ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ಅಗತ್ಯ ಎಂದರು.
ಪ್ರತಿಭಟನೆಯಲ್ಲಿ ಭಾರತೀಯ ವೈದ್ಯರ ಸಂಘದ ಇಂಡಿ ಘಟಕದ ಗೌರವ ಅಧ್ಯಕ್ಷ ಭಾರತಿ ಗಜಾಕೋಶ ಕಾರ್ಯದರ್ಶಿ ಡಾ|| ಎಂ.ಎಚ್.ಅAಕಲಗಿ, ವೈದ್ಯರಾದ ಸಂತೋಷ ಪಾಟೀಲ ಶಿವರಾಜಕುಮಾರ ಕೊಪ್ಪಾ, ಭವಾನಿಕುಮಾರ ಕದಮ್, ರಮೇಶ ಪೂಜಾರಿ, ,ಪ್ರತೀಕ ಪಾಟೀಲ , ಆರ್.ಎಂ.ಮಾಳಿ,ಆರ್.ವಿ.ರೋಡಗಿ,ಶ್ರೀಧರ ಕಾವಿ, ನಾಜಿಯಾ ಮುಲ್ಲಾ, ಪ್ರಭಾಕರ ಬಿರಾದಾರ, ಕುಮಾರಗೌಡ ಪಾಟೀಲ, ರಾಘವೇಂದ್ರ ಬಿರಾದಾರ,ಎಂ.ಎನ್,ಕೋಳಿ,ಮಲ್ಲಿಕಾರ್ಜುನ ಬಿರಾದಾರ, ಸರಸಂಬಿ, ಕಮಲಾಕರ ದೇಸಾಯಿ, ಎಸ್.ಎಸ್.ಮರಗೂರ, ಅಜಯ ದೇಸಾಯಿ, ವಿಕಾಸ ಸಿಂದಗಿ, ಆರ್.ಎಸ್.ತಾಂಬೆ,ಅಕ್ಷತಾ ಬೊಳಸುರ,ಅನುಷಾ ಶೃತಿ ಕುಂಬಾರ, ಕಿರಣ ಗಜಾಕೋಶ , ಪ್ರೀತಿ ಕೋಳೆಕರ, ಅಮೀತ ಕೋಳೆಕರ, ವಿಪುಲ ಕೋಳೆಕರ, ಮತ್ತಿತರಿದ್ದರು.