ತೈವಾನ್​ನಲ್ಲಿ 6.3 ತೀವ್ರತೆಯ ಭಾರಿ ಭೂಕಂಪ

Ravi Talawar
ತೈವಾನ್​ನಲ್ಲಿ 6.3 ತೀವ್ರತೆಯ ಭಾರಿ ಭೂಕಂಪ
WhatsApp Group Join Now
Telegram Group Join Now

ತೈಪೆ: ತೈವಾನ್‌ನ ಪೂರ್ವ ನಗರ ಹುವಾಲಿಯನ್‌ನಿಂದ 34 ಕಿ.ಮೀ (21.13 ಮೈಲುಗಳು) ದೂರದಲ್ಲಿ ಶುಕ್ರವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸೆಂಟ್ರಲ್ ವೆದರ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಸದ್ಯಕ್ಕೆ ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಭೂಕಂಪದಿಂದಾಗಿ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ಅಲುಗಾಡಿವೆ. 9.7 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಆಡಳಿತ ತಿಳಿಸಿದೆ. ಹುವಾಲಿಯನ್ ಕೌಂಟಿ, ಟೈಟಂಗ್ ಕೌಂಟಿ, ಯಿಲಾನ್ ಕೌಂಟಿ, ನಾಂಟೌ ಕೌಂಟಿ, ತೈಚುಂಗ್, ಚಿಯಾಯಿ ಕೌಂಟಿ, ಚಾಂಗ್ವಾ ಕೌಂಟಿ ಮತ್ತು ಯುನ್ಲಿನ್ ಕೌಂಟಿ ಪ್ರದೇಶಗಳಲ್ಲಿ ಭೂಕಂಪನ ತೀವ್ರತೆಯ ಪ್ರಮಾಣ ರಿಕ್ಟರ್ ಮಾಪಕದಲ್ಲಿ 4ರಷ್ಟು ದಾಖಲಾಗಿದೆ. ಹ್ಸಿಂಚು ಕೌಂಟಿ, ಮಿಯಾಲಿ ಕೌಂಟಿ, ತಾಯೊಯುವಾನ್, ನ್ಯೂ ತೈಪೆ, ಚಿಯಾಯಿ, ಕಾವೊಸಿಯುಂಗ್, ಹ್ಸಿಂಚು ಮತ್ತು ತೈನಾನ್‌ಗಳಲ್ಲಿ ಭೂಕಂಪನ ತೀವ್ರತೆ ಪ್ರಮಾಣ 3 ದಾಖಲಾಗಿದೆ. ಪೆಂಗು, ತೈಪೆ, ಕೀಲುಂಗ್ ಮತ್ತು ಪಿಂಗ್ಟಂಗ್ ಕೌಂಟಿಗಳಲ್ಲಿ ಭೂಕಂಪನ ತೀವ್ರತೆ ಪ್ರಮಾಣ 2ರಷ್ಟು ಕಂಡುಬಂದಿದೆ.

WhatsApp Group Join Now
Telegram Group Join Now
Share This Article