ಚನ್ನಮ್ಮನ ಕಿತ್ತೂರು: ನಮ್ಮ ಭಾರತ ದೇಶದ ಸ್ವತಂತ್ರಕ್ಕಾಗಿ ಅನೇಕರು ಬ್ರಿಟಿಷರೊಂದಿಗೆ ಹೋರಾಟ ಮಾಡಿ, ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ಸ್ವಾತಂತ್ರ್ಯ ನಂತರ ಒಳಗಿನ ಮತ್ತು ದೇಶದ ಘಡಿಯ ಹೊರಗೆ ನಿರಂತರ ಹೋರಾಟ ಮಾಡಿತಿರುವದು ನಮ್ಮ ಯೋಧರು ಅವರಿಗೆ ನಮ್ಮ ಸಲಾಂ ಎಂದು ಚನ್ನಮ್ಮನ ಕಿತ್ತೂರ ತಹಶೀಲ್ದಾರರಾದ ರವೀoದ್ರ ಹಾದಿಮನಿ ಹೇಳಿದರು.
ಅವರು ಪಟ್ಟಣದ ಚನ್ನಮ್ಮನ ವೃತ್ತದ ತಾಯಿ ಚನ್ನಮ್ಮಾಜಿ ಪುತ್ತಳಿ ಮುಂಭಾಗದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಸಮಾರಂಭದಲ್ಲಿ ಮಾತನಾಡಿದರು. ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ನಾಡಿನ ತಾಯಿ ಚನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ, ಅಮಟುರ ಬಾಳಪ್ಪ, ಬೆಳವಡಿ ಮಲ್ಲಮ್ಮ ಇನ್ನೂ ಅನೇಕರು ಹೋರಾಟ ಮಾಡಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ನಾಡಿನಿಂದ ದುಮುಖಿ ಸ್ವಾತಂತ್ರ್ಯ ಸಿಗುವಲ್ಲಿ ಕಿತ್ತೂರು ನಾಡಿನ ಪಾತ್ರ ಬಹಳ ಇದೆ ಎಂದರು.
ಈ ಸಂದರ್ಭದಲ್ಲಿ ತಾ ಪಂ ಇ ಓ ಕಿರಣ ಘೋರ್ಪಡೆ, ಸಿಪಿಐ ಶಿವಾನಂದ ಗುಡಗನಟ್ಟಿ, ಸಹಾಯಕ ಅಭಿಯಂತರ ಎಸ್ ಆರ್. ಮಿರಜಕರ, ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ತುಬಾಕಿ, ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಸೇರಿದಂತೆ ಅಧಿಕಾರಿ ವರ್ಗದವರು, ರಾಜಕೀಯ ಮುಖಂಡರು, ಎಲ್ಲ ಶಾಲಾ, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.