ಇಂಡಿ: ವಿವಿಧೆತೆಯಲ್ಲಿ ಏಕತೆ ಸಾರುವ ಯಶಶ್ವಿ ಪ್ರಜಾಪ್ರಭುತ್ವದ ರಾಷ್ಟçÀ ಯಾವುದಾದರು ಇದ್ದರೆ ಅದು ಭಾರತ ದೇಶವಾಗಿದೆ. ತಾಂತ್ರಿಕ ಯುಗವಾದ ಇಂದು ಎಲ್ಲ ವಿಧದಲ್ಲು ಸಶಕ್ತವಾಗಿದ್ದು ಸ್ವಾವಲಂಬಿಯತ್ತ ಸಾಗುತ್ತಿರುವುದಕ್ಕೆ ಹೇಮ್ಮೆ ಎನಿಸುತ್ತದೆ ಎಂದು ವಿಧಾನಸಭೆಯ ಅಂದಾಜು ಸ್ಥಾಯಿಸಮಿತಿ ಅಧ್ಯಕ್ಷ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಭಾರತ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಜಾಗತೀಕ ನಾಯಕನಾಗಿ ಮಾರ್ಪಟ್ಟಿದೆ. ಸಧ್ಯದ ಪರಿಸ್ಥಿಯಲ್ಲಿ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು ಎಲ್ಲರೂ ಸಂಪನ್ಲೂಲ ವ್ಯಕ್ತಿಗಳಾದರೆ ಭಾರತ ಶಕ್ತಿಶಾಲಿ ಸಶಕ್ತ ಭಾರತ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ. ಸರ್ವ ವಿಧದಲ್ಲು ಸರ್ವ ಶ್ರೇಷ್ಠ ಭಾರತ ದೇಶÀವಾಗಬೇಕು ಎಂಬ ಅಂಬೇಡಕರ ಮತ್ತು ಗಾಂಧೀಜಿಯವರ ಕನಸಾಗಿದ್ದು ಅದನ್ನು ನನಸಾಗಿಸಲು ಎಲ್ಲರ ಪ್ರಯತ್ನ ಅಗತ್ಯ. ಭಾರತವು ೭೮ ನೇ ಸ್ವಾತಂತ್ರೊö್ಯÃತ್ಸವ ಆಚರಿಸುತ್ತಿರುವಾಗ ಅಲ್ಲಿಂದ ಇಲ್ಲಿಯ ವರೆಗೆ ನಡೆದು ಬಂದ ದಾರಿಯನ್ನು ಮತ್ತು ಇಂದಿನ ಅಭಿವೃದ್ದಿ ಹೊಂದಿದ ದೇಶದ ಕಲ್ಪನೆಯನ್ನು ಅವಲೋಕಿಸಿದಾಗ ಹೆಮ್ಮೆ ಎನಿಸುತ್ತದೆ ಎಂದರು.
ಕAದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ, ತಹಸೀಲ್ದಾರ ಬಿ.ಎಸ್.ಕಡಕಬಾವಿ ಮಾತನಾಡಿದರು.
ವೇದಿಕೆಯ ಮೇಲೆ ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್,ಇಒ ಗುರುಶಾಂತ ಬಳುಂಡಗಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮತ್ತಿತರಿದ್ದರು. ಶಿಕ್ಷಕ ಬಸವರಾಜ ಗೋರನಾಳ ನಿರೂಪಿಸಿದರು.
ಲಚ್ಯಾಣದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸುವಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಆರೋಗ್ಯ ಇಲಾಖೆಯ ಟಿಎಚ್‌ಒ ಅರ್ಚನಾ ಕುಲಕರ್ಣಿ, ಸರಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ|| ವಿಪುಲ್ ಕೋಳೇಕರ, ಡಾ|| ಚೈತ್ರಾ ಬಜಂತ್ರಿ, ಶಾಂತಾಬಾಯಿ ಶಹಾಪುರ,ಎಂ.ಎಫ್. ದರ್ಗಾ ಹಾಗೂ ಹೇಸ್ಕಾಂ ಇಲಾಖೆಯ ಎಇಇ ಮೇಂಡೆಗಾರ. ಎಸ್‌ಒಗಳಾದ ಲಾಳಸಂಗಿ, ಸಂತೋಷ ಬನಗೊಂಡ, ಕಂದಾಯ ಇಲಾಖೆಯ ಎಚ್.ಎಸ್.ಗುನ್ನಾಪುರ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಅವಜಿ, ಪೋಲಿಸ ಇಲಾಖೆಯ ಎಸ್.ಎಂ.ಬಗಲಿ,ಎA.ಆಯ್.ಮಠಪತಿ,ಎಸ್.ವಾಯ್.ಜೆರಟಗಿ,ಆರ್.ಎಸ್.ಪಡಗಾನೂರ ಮತ್ತು ವಿ.ಜಿ.ಪರಮಗೊಂಡ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅದಲ್ಲದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ,ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅದಲ್ಲದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸರಕಾರಿ ಪ್ರಾಢಶಾಲೆ ಸಾತಲಗಾಂವದ ವಿಜಯಲಕ್ಷಿö್ಮÃ ಆಲಮೇಲ ಇವರಿಗೆ ಇಂಡಿಯ ಶ್ರೀ ಶಾಂತೇಶ್ವರ ಶಾಲೆಯಲ್ಲಿ ೧೯೮೯ ರಲ್ಲಿ ಕಲಿತ ಗೆಳೆಯರ ಬಳಗದ ವತಿಯಿಂದ ಹತ್ತು ಸಾವಿರ ರೂ ಸುರೇಶ ಕೋಳೆಕರ ಗುರುಗಳ ಸ್ಮರಣಾರ್ಥ ನೀಡಿ ಗೌರವಿಸಲಾಯಿತು.
ಇದಕ್ಕು ಮೊದಲು ಎಸಿ ಅಬೀದ್ ಗದ್ಯಾಳ ಇವರಿಗೆ ಪೋಲಿಸ, ಹೋಮಗಾರ್ಢ, ಎನ್.ಸಿ.ಸಿ ಮತ್ತು ವಿವಿಧ ಶಾಲೆಯ ತಂಡದಿAದ ಗೌರವ ವಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಪುರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜು ಮುಖ್ಯಸ್ಥರು ಪಾಲ್ಗೊಂಡಿದ್ದರು.