ಶಂಕಿತ ಪಾಕ್ ನುಸುಳುಕೋರನನ್ನು ಗುಂಡಿಕ್ಕಿ ಕೊಂದ ಬಿಎಸ್ಎಫ್

Ravi Talawar
ಶಂಕಿತ ಪಾಕ್ ನುಸುಳುಕೋರನನ್ನು ಗುಂಡಿಕ್ಕಿ ಕೊಂದ ಬಿಎಸ್ಎಫ್
WhatsApp Group Join Now
Telegram Group Join Now

ಜಲಂಧರ್: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿರುವಂತೆಯೇ ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಶಂಕಿತ ಪಾಕ್ ನುಸುಳುಕೋರನನ್ನು ಬಿಎಸ್ಎಫ್ ಗುಂಡಿಕ್ಕಿ ಕೊಂದಿದೆ.

ಸೋಮವಾರ ರಾತ್ರಿ 8:30 ರ ಸುಮಾರಿಗೆ ತರ್ನ್ ತರನ್ ಜಿಲ್ಲೆಯ ದಾಲ್ ಗ್ರಾಮದಲ್ಲಿ ವ್ಯಕ್ತಿಯೋರ್ವ ಅಂತಾರಾಷ್ಟ್ರೀಯ ಗಡಿ ದಾಟಿ ಗಡಿ ಬೇಲಿಯನ್ನು ಸಮೀಪಿಸುತ್ತಿರುವುದು ಕಂಡು ಬಂದಿತು. ಆತ ಗಡಿ ದಾಟದಂತೆ ಬಿಎಸ್‌ಎಫ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ನಿಲ್ಲದೆ ಗಡಿ ಭದ್ರತಾ ಬೇಲಿಯತ್ತ ನಡೆದು ಬಂದಿದ್ದಾನೆ.

WhatsApp Group Join Now
Telegram Group Join Now
Share This Article