ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ  ದಿ. ವೀರಭದ್ರ ಕಾಡದವರ ಪಾತ್ರ ಅಪಾರ: ಡಾ. ಮಲ್ಲಿಕಾರ್ಜುನ ಶ್ರೀ 

Ravi Talawar
ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ  ದಿ. ವೀರಭದ್ರ ಕಾಡದವರ ಪಾತ್ರ ಅಪಾರ: ಡಾ. ಮಲ್ಲಿಕಾರ್ಜುನ ಶ್ರೀ 
WhatsApp Group Join Now
Telegram Group Join Now
ಘಟಪ್ರಭಾ: ಪಟ್ಟಣದ ಅನೇಕ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಬೆಳವಣಿಗೆಗೆ ತಮ್ಮ ಯೋಜನೆಗಳ ಮುಖಾಂತರ ಯಶಸ್ವಿಯಾಗಿ ನಡೆಸಿ, ಅನೇಕರಿಗೆ ಕೆಲಸ ನೀಡಿ, ಸಹಕಾರಿ ಮತ್ತು ಕೃಷಿ ರಂಗದಿಂದ ಜನರಿಗೆ ದಿ. ವೀರಭದ್ರ ಕಾಡದವರ ಆದರ್ಶವಾಗಿದ್ದರು ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ರಾಜಾಪುರ ರಸ್ತೆಯ ಕಾಳಿಕಾದೇವಿ ದೇವಸ್ಥಾನದ ಹತ್ತಿರ  ಸೌಕರ್ಯ ಮಲ್ಟಿಪರಪಸ್  ಸೌಹಾರ್ದ ಕೋ ಆಪ ಸೊಸೈಟಿ ಲಿ. ಇದರ ಆವರಣದಲ್ಲಿ ಈ ಸಂಸ್ಥೆಯ ಸಂಸ್ಥಾಪಕರಾದ ದಿ.  ಶ್ರೀ ವೀರಭದ್ರ ಕಾಡದವರ  ಅವರ ಪುತ್ತಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರಭಾಂವಿ ದುರದುಂಡೇಶ್ವರ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಘಟಪ್ರಭಾ ಹೊಸಮಠದ ಶ್ರೀ ವಿರೂಪಾಕ್ಷಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜೇಜಿಕೋ ಅಧ್ಯಕ್ಷ ಅಪ್ಪಯ್ಯಪ್ಪ ಬಡಕುಂದ್ರಿ, ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ, ಸೌಕರ್ಯ ಸೊಸೈಟಿಯ ಅಧ್ಯಕ್ಷರು ಸುರೇಶ ಕಾಡದವರ, ವೀರಭದ್ರೇಶ್ವರ ಸೊಸೈಟಿ ಅಧ್ಯಕ್ಷ ಜಯಪ್ರಕಾಶ ಕಾಡದವರ, ಕಲ್ಲಪ್ಪ ಕಾಡದವರ, ಜಗದೀಶ್ ಕಾಡದವರ, ಭೀರಪ್ಪ ಢಬಾಜ,ಭೂಪಾಲ ಖೇಮಲಾಪುರೆ, ಅರವಿಂದ ಬಡಕುಂದ್ರಿ, ಬರಮು ನಾಗನೂರ, ಅಪ್ಪಾಜಿ ಹುದ್ದಾರ, ಸೌಕರ್ಯ ಸಹಕರಿಯ ವ್ಯವಸ್ಥಾಪಕರಾದ ಮಲಗೌಡ ಪಾಟೀಲ,ವೀರಭದ್ರೇಶ್ವರ ಸಹಕಾರಿಯ ವ್ಯವಸ್ಥಾಪಕರಾದ ವಿನೋದ ದಾದನವರ ಸೇರಿದಂತೆ  ಪಟ್ಟಣದ ಸಹಕಾರಿ ಮುಖಂಡರು, ರಾಜಕೀಯ ಮುಖಂಡರು, ಸಾರ್ವಜನಿಕರು, ಸಹಕಾರಿಯ ಸಿಬ್ಬಂದಿ  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article