ಹುಕ್ಕೇರಿ: ದೇಶದ ಸ್ವಾತಂತ್ರದ ಹೋರಾಟ ತ್ಯಾಗ ಬಲಿದಾನ ಮಹನೀಯರ ಶ್ರಮದ ಪರಿಕಲ್ಪನೆ ಇಂದಿನ ಮಕ್ಕಳಿಗೆ ತಿಳಿಸುವದು ಅತಿ ಮುಖ್ಯವಾಗಿದೆ ಎಂದು ಅವೂಜಿಕರ
ಆಶ್ರಮದ ಅಭಿನವ ಮಂಜುನಾಥ ಮಹಾರಾಜರು ಹೇಳಿದರು.
ಪಟ್ಟಣದ ತಾಲುಕು ಪಂಚಾಯತಿ ಸಭಾ ಭವನದಲ್ಲಿ ಹಮ್ಮಿಕೊಂಡ ಶಿವಾನಂದ ಝಿರ್ಲಿ ಪೌಂಡೇಶನ್ ಉದ್ಘಾಟನೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಗಣ್ಯ ವರ್ತಕರಾದ ಶಿವಾನಂದ ನೂಲಿ,, ಪ್ರೋ.ಪಿ.ಜಿ ಕೊಣ್ಣೂರ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಗಾರ್ಗಿ. ಮಾತನಾಡಿ. ಮಕ್ಕಳಲ್ಲಿ ದೇಶದ
ಇತಿಹಾಸದ ಅರಿವೂ ಹಾಗೂ ಝಿರ್ಜಿ ಪೌಂಡೇಶನ್ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಕಾರ್ಯಶ್ಲಾಘನೀಯ ಎಂದರು
ಕಾಂಗ್ರೇಸ ಘಟಕಾಧ್ಯಕ್ಷ ಅಧ್ಯಕ್ಷ ವಿಜಯ ರವದಿ, ಜಾನಪದ ಪರಿಷತ್ತಿನ ಅಧ್ಯಕ್ಷ ಸುಭಾಷ ನಾಯಿಕ,ಕ್ಷೇತ್ರ ಸಮನ್ವಧಿಕಾರಿ ಎ.ಎಸ್ ಪದ್ಮನವರ, ಮಾತನಾಡಿದರು.
ಶಿವಾನಂದ ಝಿರ್ಲಿ ಫೌಂಡೇಶನ್ ಅಧ್ಯಕ್ಷ ಶಿವಾನಂದ ಝಿರ್ಲಿ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ವಿದ್ಯಾರ್ಥಿಗಳಲ್ಲಿ ಕಿಳರಿಮೆ ಹೋಗಲಾಡಿಸುವ ಪ್ರತಿಭೆಯನ್ನು ಗುರುತಿಸುವಲ್ಲಿ
ನಿಟ್ಟಿನಲ್ಲಿ ಶಿಕ್ಷಣಕ್ಕಾಗಿ ಒತ್ತು ನೀಡುವ ಮುಖ್ಯ ದ್ಯೇಯ ಎಂದರು
೭೭ ಸ್ವಾತಂತ್ರೋತ್ಸವ ನಿಮಿತ್ಯ ತಾಲೂಕಿನ ಪ್ರೌಢಶಾಲೆ, ,ಕಾಲೇಜ,ಹಾಗೂ ಪದವಿ ಕಾಲೇಜಗಳ ವಿಧ್ಯಾರ್ಥಿಗಳಿಗೆ ಭಾಷಣ ಸ್ಪರ್ದೇ ಏರ್ಪಡಿಸಲಾಗಿತ್ತು. ಚಿತ್ರಕಲಾ ಶಿಕ್ಷಕರು ಕುಮಾರ ಬಡಿಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು..ಕಾರ್ಯದರ್ಶಿ ಮಹಾಲಕ್ಷ್ಮಿಝಿರ್ಲಿ ವಂದಿಸಿದರು. ಆನಂದ ಝಿರ್ಲಿ ವಂದಿಸಿದರು. ನಿರ್ಣಾಯಕರಾಗಿ ನೀಲಾವತಿ ರಜಪೂತ, ವೀಣಾ ಬಾಳಿಕಾಯಿ ಕಾರ್ಯನಿರ್ವಹಿಸಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮ, ಪದವಿ ವಿದ್ಯಾರ್ಥಿಗಳು ನನ್ನ ಕನಸಿನ ಭಾರತ ಹಾಗೂ ಪದವಿ
ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ ಈ ವಿಷಯ ಕುರಿತು ೫೦ ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾಗವಹಿಸಿದ್ದರು ಪ್ರಶಸ್ತಿ ವಿಜೇತರು: ಪ್ರೌಢಶಾಲಾ ವಿಭಾಗ
ಪ್ರಥಮ ಶ್ರೀದೇವಿ ಮಸರುಗುಪ್ಪಿ, ಅಪ್ಸಾನ ನದಾಫ್. ಸುಪ್ರಿಯ ಅಂಕಲಿ. ಪದವಿ ಪೂರ್ವದಲ್ಲಿ ಸುಹಾಸಿನಿ ಪಾಟೀಲ, ದ್ವಿತೀಯ ದೀಪಾ ಸನದಿ ತೃತಿಯ ಲಕ್ಷ್ಮಿ ಗಿಪಾಟೀಲ,ಪದವಿ ವಿಭಾಗದಲ್ಲಿ ,ಪ್ರಥಮ ಲಕ್ಷ್ಮಣ್ ಯಡ್ರಾವಿ.ದ್ವಿತೀಯ ಅಕ್ಷತಾ ಹುಲ್ಲೋಳಿ,ತೃತೀಯ ಅಮಿತಾ ಮುತಾಲಿಕ.