ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧಾರ

Ravi Talawar
ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧಾರ
WhatsApp Group Join Now
Telegram Group Join Now

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ ಸತತ 9ನೇ ಬಾರಿಯೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಇರುವಂತೆ ಶೇಕಡಾ 6.5ರಲ್ಲೇ ಮುಂದುವರಿಸಿದೆ. ತನ್ನ ಆರ್ಥಿಕ ನೀತಿಗಳ ಸಭೆ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿದ ಆರ್​ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್​, ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಮುಂದುವರೆಸುವುದಾಗಿ ಘೋಷಿಸಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ಆರ್​ಬಿಐ ತನ್ನ ಎಚ್ಚರಿಕೆ ಹೆಜ್ಜೆಯನ್ನು ಮುಂದುವರೆಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಇರಿಸಲು ತೀರ್ಮಾನಿಸಿದೆ. ವಿಕಸಿಸುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಒಟ್ಟಾರೆ ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ, ನಾಲ್ವರು ಸದಸ್ಯರು ರೆಪೋ ದರವನ್ನು ಶೇಕಡಾ 6.5ರ ಮಟ್ಟದಲ್ಲೇ ಇರಿಸಲು ನಿರ್ಧರಿಸಿದ್ದರಿಂದಾಗಿ ಆರ್​ಬಿಐ ಈ ನಿಲುವಿಗೆ ಬಂದಿದೆ.

“ಸ್ಥಾಯಿ ಠೇವಣಿ ಸೌಲಭ್ಯದ ದರವು ಶೇ 6.25, ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ದರ ಹಾಗೂ ಬ್ಯಾಂಕ್ ದರವನ್ನು ಶೇ 6.75ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ದಾಸ್​ ಇದೇ ವೇಳೆ ಪ್ರಕಟಿಸಿದರು. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವ ದೃಷ್ಟಿಕೋನದಿಂದ ರೆಪೋ ದರವನ್ನು ಸ್ಥಿರವಾಗಿಡುವ ನಿರ್ಧಾರಕ್ಕೆ ಬರಲಾಗಿದೆ. ಆಹಾರ ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳಿಂದಾಗಿ ಹಣದುಬ್ಬರವನ್ನು ಶೇಕಡಾ 4ರೊಳಗೆ ತರುವ ಗುರಿಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ತನ್ನ ಗುರಿ ತಲುಪಲು ಕೇಂದ್ರೀಯ ಬ್ಯಾಂಕ್‌ ಸವಾಲುಗಳನ್ನು ಎದುರಿಸುತ್ತಿದೆ.

WhatsApp Group Join Now
Telegram Group Join Now
Share This Article