ವಕೀಲರ ಸಂಘದ ಜಿಲ್ಲಾಧ್ಯಕ್ಷರಾಗಿ ರಾಮ್ ಬ್ರಹ್ಮ ಅಧಿಕಾರ ಸ್ವೀಕಾರ 

Ravi Talawar
ವಕೀಲರ ಸಂಘದ ಜಿಲ್ಲಾಧ್ಯಕ್ಷರಾಗಿ ರಾಮ್ ಬ್ರಹ್ಮ ಅಧಿಕಾರ ಸ್ವೀಕಾರ 
WhatsApp Group Join Now
Telegram Group Join Now
ಬಳ್ಳಾರಿ ಆಗಸ್ಟ್ 7. ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಕಟ್ಟಡ ದೂರದಿಂದ   ಕಣ್ಣಿಗೆ ಅತ್ಯಂತ ಸುಂದರವಾಗಿ ಗೋಚರಿಸುತ್ತದೆ ಅದರಂತೆ ಇಲ್ಲಿನ ವಕೀಲರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲರ ಜೀವನ ಇಲ್ಲ, ಈ ನ್ಯಾಯಾಲಯದ ಆವರಣದಲ್ಲಿ ನೋಟರಿಗಳು ತೆರೆದ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ ಅವರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಇರುವುದಿಲ್ಲ ಅದೇ ರೀತಿಯಾಗಿ ಪಾರ್ಕಿಂಗ್ ಶೆಡ್ ಕೂಡ ಇರುವುದಿಲ್ಲ ಇವುಗಳನ್ನು ನಿರ್ಮಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ ಎಂದು ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ ರಾಮ್ ಬ್ರಹ್ಮ ಇಂದು ವಕೀಲರ ಸಂಘದ ಕಟ್ಟಡದಲ್ಲಿ ಮಾಜಿ ಅಧ್ಯಕ್ಷರಾದ ಎರೇಗೌಡ ಅವರಿಂದ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದರು.
ಹಾಗೆಯೇ ಈ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಮತ್ತು ಬಡ ವಕೀಲರ ಜೀವನ ತುಂಬಾ ಕಷ್ಟಕರವಾಗಿದೆ ಅವರ ಜೀವನಕ್ಕೆ ಮತ್ತು ಕುಟುಂಬಕ್ಕೆ ಅನುಕೂಲಕರ ಆಗುವ ರೀತಿಯಲ್ಲಿ ವಕೀಲರ ಸಂಘದಲ್ಲಿ ನಿಧಿಯನ್ನು ಸ್ಥಾಪಿಸಲಾಗುವುದು ಈ ನಿಧಿಯಿಂದ ವಕೀಲರ ಮತ್ತು ಅವರ ಕುಟುಂಬದ ವೈದ್ಯಕೀಯ ವೆಚ್ಚಕ್ಕೆ ಹಣದ ನೆರವು ಪಡೆಯಬಹುದು ಎಂದರು.
ಚುನಾವಣೆಯಲ್ಲಿ ಏ ಗುಂಪು ಮತ್ತು ಬಿ ಗುಂಪು ಎಂದು ಸ್ಪರ್ಧೆ ಏರ್ಪಟ್ಟಿತ್ತು, ಆದರೆ ಇದು ಕೇವಲ ಚುನಾವಣೆವರೆಗೆ ಮಾತ್ರ ಇರುತ್ತದೆ ನಂತರ ಯಾವುದೇ ಗುಂಪುಗಳಿರುವುದಿಲ್ಲ ಇದು ವಕೀಲರ ಸಂಘವೇ ಹೊರತು ಅವರ ಗುಂಪು ಇವರ ಗುಂಪು ಎಂದು ವಿಂಗಡಣೆ ಆಗಿರುವುದಿಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಕೀಲರ ಸಂಘವನ್ನು ಸುಭದ್ರ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ವಕೀಲರ ಸಂಘದ ಕುರಿತು ನನಗೆ ಒಂದು ಕನಸಿದೆ ಆ ಕನಸಿನಂತೆ ಈ ಸಂಘವನ್ನು ರೂಪಿಸಿ ಮುಂದಿನ ದಿನಗಳಲ್ಲಿ ಎಲ್ಲಾ ವಕೀಲರಿಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಸಂಘದ ಚುನಾವಣೆಯ ಸಂದರ್ಭದಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳಿಗೆ ಸಮಾನವಾದ ಮತಗಳು ಲಭಿಸಿದ್ದರಿಂದ ಹಿರಿಯ ವಕೀಲರ ಅಭಿಪ್ರಾಯ ಮತ್ತು ಸಲಹೆ ಸೂಚನೆಯಂತೆ ಇಬ್ಬರಿಗೂ ತಲಾ ಒಂದು ವರ್ಷದ ಅವಧಿಯ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.  ಈ ಸಂದರ್ಭದಲ್ಲಿ ಸಂಘಕ್ಕೆ ಆಯ್ಕೆಗೊಂಡ ಉಪಾಧ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯದರ್ಶಿಗಳು ನಿರ್ದೇಶಕರು ಇದ್ದರು.
WhatsApp Group Join Now
Telegram Group Join Now
Share This Article