ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ಜನರ ನಿದ್ದೆಗೆಡಿಸಿವೆ. ನಕಲಿ ಗುರುತಿನ ಚೀಟಿ ತೋರಿಸಿ ಭಾರತಕ್ಕೆ ಬರಲು ಯತ್ನಿಸುತ್ತಿದ್ದ ಬಾಂಗ್ಲಾ ದಂಪತಿಯನ್ನು ಗಡಿಯಲ್ಲಿ ಬಿಎಸ್ಎಫ್ ಯೋಧರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಚಂಗ್ರಬಂಧ ವಲಸೆ ಚೆಕ್ ಪೋಸ್ಟ್‌ನಲ್ಲಿ ಬಾಂಗ್ಲಾದೇಶದ ದಂಪತಿ ನಕಲಿ ಭಾರತೀಯ ದಾಖಲೆಗಳೊಂದಿಗೆ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ದಂಪತಿಯನ್ನು ಇನಾಮುಲ್ ಹಕ್ ಸೊಹೈಲ್ ಮತ್ತು ಅವರ ಪತ್ನಿ ಸಂಜಿದಾ ಝಿನಾ ಇಲಾಹಿ ಎಂದು ಗುರುತಿಸಲಾಗಿದ್ದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಭಾರತೀಯ ಗುರುತಿನ ದಾಖಲೆಗಳು ಪತ್ತೆಯಾಗಿವೆ. ಅವರ ಜೊತೆಯಲ್ಲಿ ಅವರ ಪುಟ್ಟ ಮಗು ಕೂಡ ಇತ್ತು.
ಬಾಂಗ್ಲಾದೇಶದಿಂದ 7 ಬಾಂಗ್ಲಾದೇಶದಿಂದ 7 ದಿನಗಳ ವೈದ್ಯಕೀಯ ವೀಸಾದೊಂದಿಗೆ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಗಡಿ ಭದ್ರತಾ ಪಡೆ (ಬಿಎಸ್ಎಫ್) ದಂಪತಿಯನ್ನು ಕಸ್ಟಡಿಗೆ ತೆಗೆದುಕೊಂಡಿತು.
ಬಾಂಗ್ಲಾದೇಶದ ರಂಗ್‌ಪುರ ಮೂಲದ ಸೊಹೈಲ್‌ನನ್ನು ಬಿಎಸ್‌ಎಫ್ ಅಧಿಕಾರಿಗಳು ಚಂಗ್ರಬಂಧದಲ್ಲಿ ತಪಾಸಣೆಯ ಭಾಗವಾಗಿ ಬಂಧಿಸಿದ್ದಾರೆ. ಅವರ ಸಾಮಾನುಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಬಿಎಸ್‌ಎಫ್ ಸಿಬ್ಬಂದಿ ದಂಪತಿಯ ಲಗೇಜ್‌ನಲ್ಲಿ ಅಡಗಿಸಿಟ್ಟ ಭಾರತೀಯ ದಾಖಲೆಗಳನ್ನು ಪತ್ತೆ ಮಾಡಿದರು. ಐಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಈ ದಾಖಲೆಗಳ ಸತ್ಯಾಸತ್ಯತೆ ಮತ್ತು ಮೂಲವು ಪ್ರಸ್ತುತ ತನಿಖೆಯಲ್ಲಿದೆ.
ಅವರ ಬಂಧನದ ನಂತರ, ದಂಪತಿಯನ್ನು ಹೆಚ್ಚಿನ ವಿಚಾರಣೆ ಮತ್ತು ಕಾನೂನು ಕ್ರಮಕ್ಕಾಗಿ ಬಂಗಾಳ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಘಟನೆಯ ನಂತರ ಪಶ್ಚಿಮ ಬಂಗಾಳದ ಹಲವು ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.