ತುಮಕೂರು ಕೊಬ್ಬರಿ ಬೆಳೆಗಾರರಿಗೆ 346.50 ಕೋಟಿ ರೂ. ಪಾವತಿಸಿದ ಕೇಂದ್ರ

Ravi Talawar
ತುಮಕೂರು ಕೊಬ್ಬರಿ ಬೆಳೆಗಾರರಿಗೆ 346.50 ಕೋಟಿ ರೂ. ಪಾವತಿಸಿದ ಕೇಂದ್ರ
WhatsApp Group Join Now
Telegram Group Join Now

ದೆಹಲಿ, ಆಗಸ್ಟ್.06: ಕೊಬ್ಬರಿ ಬೆಳೆಯುವ ರೈತರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಸಿಹಿ ಸುದ್ದಿ ನೀಡಿದ್ದಾರೆ. 2024ರ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸ್ಪಲಟ್ಟ ಉಂಡೆ ಕೊಬ್ಬರಿ ಖರೀದಿಗೆ ಸಂಬಂಧಪಟ್ಟ ಮೊತ್ತ ಪಾವತಿ ಮಾಡಲಾಗಿದೆ. ಸುಮಾರು ರೂ.346.50 ಕೋಟಿ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಪಾವತಿಸಲಾಗಿದೆ. ಈ ಬಗ್ಗೆ ಖುದ್ದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

2024ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸುಮಾರು 27,000 ರೈತರಿಂದ ಒಟ್ಟು 3,15,000 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಟ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಲಾಗಿತ್ತು. ಈ ಸಂಬಂಧ ಒಟ್ಟು ಬಾಬ್ತು ರೂ.378 ಕೋಟಿಗಳನ್ನು ತುಮಕೂರಿನ ಕೊಬ್ಬರಿ ಬೆಳೆಗಾರರಿಗೆ ಪಾವತಿಸಬೇಕಾಗಿತ್ತು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದಿಂದಾಗಿ 2024 ಆಗಸ್ಟ್​.05ರವರೆಗೆ ಸುಮಾರು ರೂ.346.50 ಕೋಟಿ ಮೊತ್ತವನ್ನು (ಪ್ರತಿಶತ 92 ರಷ್ಟು) ರೈತರ ಖಾತೆಗೆ ನೇರವಾಗಿ(ಡಿಬಿಟಿ ಮುಖೇನ) ಪಾವತಿಸಲಾಗಿದೆ.

ಸುಮಾರು 24600 ರೈತರಿಗೆ ಈ ಬಾಬ್ತು ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ಪಾವತಿಸಲಾಗಿದೆಯೆಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. ಬಾಕಿ ಉಳಿದ ಸುಮಾರು 2438 ರೈತರ ಖಾತೆಗೆ ಅಂದಾಜು 31.64ಕೋಟಿ ಬಾಬ್ತನ್ನು ರೈತರಿಗೆ ಪಾವತಿಸಬೇಕಾಗಿದೆ (ಪ್ರತಿಶತ 8ರಷ್ಟು ಮಾತ್ರ). ಈ ಮೊತ್ತವನ್ನು ಅತೀ ಶೀಘ್ರದಲ್ಲಿ ತುಮಕೂರಿನ ರೈತರಿಗೆ ಪಾವತಿಸುವಂತೆ ರಾಜ್ಯದಲ್ಲಿನ ಸಂಬಂಧಪಟ್ಟ ಎಜೆನ್ಸಿಗೆ ನಿರ್ದೆಶನ ನೀಡಲಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article