ಡೈನಾಮಿಕ್ ಐಪಿಎಸ್ ಅಧಿಕಾರಿ ಎಂದೇ ಪ್ರಸಿದ್ಧಿ ಪಡೆದ ಕಾಮ್ಯಾ ಮಿಶ್ರಾ ರಾಜೀನಾಮೆ

Ravi Talawar
ಡೈನಾಮಿಕ್ ಐಪಿಎಸ್ ಅಧಿಕಾರಿ ಎಂದೇ ಪ್ರಸಿದ್ಧಿ ಪಡೆದ ಕಾಮ್ಯಾ ಮಿಶ್ರಾ ರಾಜೀನಾಮೆ
WhatsApp Group Join Now
Telegram Group Join Now

ಪಾಟ್ನಾ: ಬಿಹಾರದ ಡೈನಾಮಿಕ್ ಐಪಿಎಸ್ ಅಧಿಕಾರಿ ಎಂದೇ ಪ್ರಸಿದ್ಧಿ ಪಡೆದಿರುವ ಕಾಮ್ಯಾ ಮಿಶ್ರಾ ರಾಜೀನಾಮೆ ನೀಡಿರುವ ಬಗ್ಗೆ ವರದಿಯಾಗಿದೆ. ವೈಯಕ್ತಿಕ ಕಾರಣಗಳಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಪೊಲೀಸ್​ ಕೇಂದ್ರ ಕಚೇರಿ PHQ ಇವರ ರಾಜೀನಾಮೆ ಅಂಗೀಕರಿಸಿಲ್ಲ ಎನ್ನಲಾಗಿದೆ. ಕಾಮ್ಯಾ ಮಿಶ್ರಾ ಅವರು ದರ್ಭಾಂಗದ ಗ್ರಾಮಾಂತರ ಎಸ್ಪಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಕಾಮ್ಯಾ ಮಿಶ್ರಾ ಅವರು 2019 ರಲ್ಲಿ UPSC ಪರೀಕ್ಷೆಯಲ್ಲಿ 172 ನೇ ರ‍್ಯಾಂಕ್​ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೇವಲ 22 ವರ್ಷ ವಯಸ್ಸು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ಸಂದರ್ಭದಲ್ಲೇ ಅವರು ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು.

ವೈಯುಕ್ತಿಕ ಕಾರಣಕ್ಕೆ ರಾಜೀನಾಮೆ: ಬಿಹಾರ ಕೇಡರ್ ಐಪಿಎಸ್ ಅಧಿಕಾರಿ ಕಾಮ್ಯಾ ಮಿಶ್ರಾ ಅವರ ರಾಜೀನಾಮೆ ಪತ್ರ ಪೊಲೀಸ್ ಕೇಂದ್ರ ಕಚೇರಿಗೆ ತಲುಪುತ್ತಿದ್ದಂತೆಯೇ, ಅತ್ತ ರಾಜ್ಯದಲ್ಲಿ ಈ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಮ್ಯಾ ಅವರು ಪ್ರಸ್ತುತ ದರ್ಭಾಂಗದ ಗ್ರಾಮಾಂತರ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಕಾರಣಗಳೇ ರಾಜೀನಾಮೆಗೆ ಕಾರಣ ಎಂದು ಅವರು ಹೇಳಿದ್ದಾರೆ.

ಒಡಿಶಾದ ಮೂಲದ ಕಾಮ್ಯಾ : ಬಿಹಾರದ ಮಾಜಿ ಸಚಿವ ಮತ್ತು ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ ಅವರ ತಂದೆ ಜಿತನ್ ಸಾಹ್ನಿ ಅವರ ಹೈ ಪ್ರೊಫೈಲ್ ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಕಾಮ್ಯಾ ಮಿಶ್ರಾ ಅವರಿಗೆ ನೀಡಲಾಗಿತ್ತು. ಕಾಮ್ಯಾ ಈ ತನಿಖೆಯನ್ನು ಬುದ್ಧಿವಂತಿಕೆಯಿಂದ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದಿನಿಂದ ಅವರು ದೇಶಾದ್ಯಂತ ಜನಜನಿತರಾಗಿದ್ದರು. ಆದರೆ ಇದೀಗ ಅವರು ವೈಯಕ್ತಿಕ ಕಾರಣಗಳಿಂದ ಅವರು ತಮ್ಮ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಪೊಲೀಸ್ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ. ಅವರ ರಾಜೀನಾಮೆ ಅಂಗೀಕಾರದ ಬಗ್ಗೆ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

WhatsApp Group Join Now
Telegram Group Join Now
Share This Article