ಚಿತ್ರದುರ್ಗ: ಸಿರಿಗೆರೆ ಮಠದ ಶ್ರೀಗಳ ಬದಲಾವಣೆ ವಿಚಾರಕ್ಕೆ ನಡೆಸಿದ ನಿನ್ನೆಯ ಸಭೆಗೆ ಟಕ್ಕರ್ ನೀಡಲು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆಯಲ್ಲಿ ಭಕ್ತರೊಂದಿಗೆ ಸಭೆ ನಡೆಸಿ ಕೌಂಟರ್ ನೀಡಿದ್ದಾರೆ. ಮಠದ ಬಗ್ಗೆ ರೆಸಾರ್ಟ್ನಲಿ ಸಭೆ ಕರೆಯುತ್ತಾರಾ? ನಿನ್ನೆ ಸಭೆ ನಡೆಸಿದವರಿಗೆ ಇನ್ನು ಮುಂದೆ ಖಾಸಗಿಯಾಗಿ ಭೇಟಿಗೆ ಅವಕಾಶ ಕೊಡುವುದಿಲ್ಲವೆಂದು ಸಿರಿಗೆರೆ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದ ಅಪೂರ್ವ ರೆಸಾರ್ಟ್ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಿರಿಗೆರೆ ಮಠದ ಶ್ರೀಗಳ ಬದಲಾವಣೆ ಮಾಡಲು ಸಭೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿನ್ನೆಯೇ ಶ್ರೀಗಳು ಸಿರಿಗೆರೆ ಗ್ರಾಮದಲ್ಲಿರುವ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಭಕ್ತರೊಂದಿಗೆ ಸಭೆ ನಡೆಸಿ ನಿನ್ನೆ ಸಭೆ ನಡೆಸಿದವರಿಗೆ ಟಾಂಗ್ ನೀಡಿದ್ದಾರೆ. ಈ ಸಭೆಯಲ್ಲಿ ಶ್ರೀಗಳ ಭಕ್ತರಲ್ಲದೇ, ಜಿಲ್ಲಾ ಹಾಗೂ ತಾಲೂಕೂ ಅಧ್ಯಕ್ಷರು ಭಾಗಿಯಾಗಿದ್ದರು.
ಸಭೆಯಲ್ಲಿ ಶ್ರೀಗಳು, ” ಮಠದ ಬಗ್ಗೆ ರೆಸಾರ್ಟ್ನಲಿ ಸಭೆ ಕರೆಯುತ್ತಾರಾ?, ಶಾಮನೂರು ಅವರ ಸಭಾಂಗಣ ಇಲ್ಲವೇ?, ನಿನ್ನೆ ಸಭೆ ನಡೆಸಿದವರಿಗೆ ಇನ್ಮುಂದೆ ಖಾಸಗಿಯಾಗಿ ಭೇಟಿಗೆ ಜತೆ ಇದೇ ತಿಂಗಳು 18ಕ್ಕೆ ಬೆಂಗಳೂರಲ್ಲಿ ಭೇಟಿ ಆಗಲು ಅವಕಾಶ ನೀಡಲ್ಲ. ಸಿರಿಗೆರೆಯಲ್ಲಿ ಮಠ ಇದೆ, ಮಠಕ್ಕೆ ಬನ್ನಿ. ಇದೇ ವೇದಿಕೆಯಲ್ಲಿ ಜನರ ಮಧ್ಯೆಯೆ ಮಾತಾನಾಡಲಿ ಎಂದು ಗರಂ ಆದರು. ಉತ್ತರಾಧಿಕಾರಿ ಆಯ್ಕೆಗೆ ಸಮಿತಿ ಮಾಡದಂತೆ ಕೇಸ್ ಹಾಕಿದ್ದೀರಿ. ಆದರೆ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಆಗ್ರಹಿಸಿದವರು ಅವರೇ. ನಾವೇನು ಜನರ ಮತ ಪಡೆದು ಗುರುಗಳಾಗಿಲ್ಲ, ಜನರ ಭಕ್ತಿ ಭಾವದಿಂದ ನಾವು ಗುರುಗಳಾಗಿದ್ದೇವೆ. ಅಧಿಕಾರ ಕಳೆದುಕೊಂಡರೆ ನೀವು ಮಾಜಿ ಆಗುತ್ತೀರಿ, ನಾವು ಆಗಲ್ಲ ಎಂದು ಶ್ರೀಗಳು ಟಕ್ಕರ್ ನೀಡಿದ್ದಾರೆ.